Thursday, April 25, 2024
spot_imgspot_img
spot_imgspot_img

ಧಾರ್ಮಿಕ ಭಾವನೆಗಳ ಮೂಲಕ ಕೆಣಕಿದರೆ ಕಾನೂನು ಮೂಲಕ ಮರೆಯಲಾಗದ ಪಾಠ ಕಲಿಸುತ್ತೇವೆ – ಶಾಸಕ ಭರತ್ ಶೆಟ್ಟಿ

- Advertisement -G L Acharya panikkar
- Advertisement -

ಸುರತ್ಕಲ್ : ಹಿಂದೂ ಧಾರ್ಮಿಕ ಸ್ಥಳಗಳನ್ನು ಅಕ್ರಮವಾಗಿ ಹೇಡಿಗಳಂತೆ ರಾತ್ರಿ ಪ್ರವೇಶಿಸಿ ಭಗ್ನಗೊಳಿಸುವವರಿಗೆ ಕ್ಷಮೆ ನೀಡಲಾಗದು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಕೂಳೂರಿನಲ್ಲಿ ನಾಗ ಮೂಲಸ್ಥಾನ ವಿಗ್ರಹಕ್ಕೆ ಹಾನಿಗೊಳಿಸಿದ ‍ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಧಾರ್ಮಿಕ ಭಾವನೆಗಳ ಮೂಲಕ ಕೆಣಕಿದರೆ ನಾವು ಕಾನೂನು ಮೂಲಕ ಮರೆಯಲಾದ ಪಾಠ ಕಲಿಸುತ್ತೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಕಠಿಣ ಎಚ್ಚರಿಕೆ ನೀಡಿದರು.
ಪೊಲೀಸ್ ಗುಪ್ತಚರ ವ್ಯವಸ್ಥೆ ಬಲಪಡಿಸಿ, ಹಿಂದೂ ಪೂಜಾ ಸ್ಥಳಗಳನ್ನು ಭಗ್ನಗೊಳಿಸುವ ಮೂಲಕ ಕ್ಷೇತ್ರದಲ್ಲಿ ಕೋಮು ಭಾವನೆ ಕೆರಳಿಸುವವರ ವಿರುದ್ದ ವಿಶೇಷ ಕಾರ್ಯಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಪೊಲೀಸ್ ಇಲಾಖೆಗೆ ಸೂಚಿಸಿದರು.

ಮಂಗಳೂರು: ನಾಗನ ಕಟ್ಟೆ ಧ್ವಂಸ ಮಾಡಿದ ಕಿಡಿಗೇಡಿಗಳು ..!

ಬೈಕಂಪಾಡಿಯಲ್ಲಿ ಕರ್ಕೇರ ನಾಗ ಮೂಲಸ್ಥಾನ ವಿಗ್ರಹ ಭಗ್ನ ಘಟನೆ ಬಳಿಕ ಕೆಲವೇ ದಿನದ ಅಂತರದಲ್ಲಿ ಇದೀಗ ಕೂಳೂರಿನಲ್ಲಿ ನಡೆದಿದೆ. ನನ್ನ ಕ್ಷೇತ್ರದಲ್ಲಿ ಕೋಮು ಸಂಘರ್ಷ ಉಂಟು ಮಾಡಲು ಷಡ್ಯಂ‍ತ್ರ್ಯ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇವಸ್ಥಾನ, ನಾಗಬನ,ದೈವಸ್ಥಾನಗಳು ಹಿಂದೂಗಳ ಪೂಜನೀಯ ಸ್ಥಳಗಳಾಗಿದ್ದು ಇವುಗಳನ್ನು ಧ್ವಂಸಗೊಳಿಸುವ ಷಡ್ಯಂತ್ರ್ಯವನ್ನು ಪತ್ತೆ ಹಚ್ಚಿ ಜೈಲಿಗೆ ತಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಈ ರೀತಿಯ ಹೀನ ಕೃತ್ಯ ಮಾಡುವ ಅಪರಾಧಿಗಳನ್ನು ಮಟ್ಟ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

- Advertisement -

Related news

error: Content is protected !!