- Advertisement -
- Advertisement -





ಕಾರವಾರ : ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ಸೀಸನ್-3 ರ ಸ್ಪರ್ಧಿಯಾಗಿದ್ದ ಭೌತೀಶ್ ಅಪಘಾತಕ್ಕೆ ಬಲಿಯಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಭೌತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಗೆ ಭೌತೀಶ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಅವರ ಬೈಕ್ ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.
ರಿಯಾಲಿಟಿ ಶೋ ಹಳ್ಳಿ ಹೈದ ಪ್ಯಾಟೆಗ್ ಬಂದ ಮೂಲಕ ಹಳ್ಳಿಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಭೌತೀಶ್ ಬಹುತೇಕ ವೀಕ್ಷಕರ ಮನಗೆದ್ದಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
- Advertisement -







