Wednesday, July 22, 2026
spot_imgspot_img
spot_imgspot_img

ಫೆ.23: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

- Advertisement -
- Advertisement -

ವಿಟ್ಲ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ (ನಿ.) ಇವರ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ರೋಟರಿ ಕ್ಲಬ್ ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು–ಪುತ್ತೂರು ಘಟಕ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.), ಸೊಬೆಯರಿ ಗ್ರೂಪ್ ಬೆಂಗಳೂರು, ಡಾ. ಕೆ. ದಯಾನಂದ ರೈ ಮತ್ತು ಸತೀಶ ರೈ ಚಾರಿಟೇಬಲ್ ಟ್ರಸ್ಟ್ (ರಿ.), ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಹಾಗೂ ಎಬಿಸಿಒ ಸ್ಟೀಲ್ ಪ್ರೈ. ಲಿ. ಮಂಗಳೂರು ಇವರ ಸಹಯೋಗದಲ್ಲಿ ನಡೆಯಲಿದೆ.

ಶಿಬಿರವು ಫೆಬ್ರವರಿ 23, 2026ರಂದು ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ವಿಟ್ಲ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.ಶಿಬಿರದ ವಿಶೇಷತೆಗಳು:ಕಣ್ಣಿನ ಸಂಪೂರ್ಣ ತಪಾಸಣೆ ಉಚಿತವಾಗಿ ನಡೆಯಲಿದೆ.ಅಗತ್ಯವಿರುವವರಿಗೆ ಉಚಿತ ಔಷಧಿ ವಿತರಣೆ ಮಾಡಲಾಗುವುದು.ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ರೋಗಿಗಳನ್ನು ಆಯ್ಕೆ ಮಾಡಿ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗುವುದು.ಕಣ್ಣಿನ ಪೊರಕೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಉಚಿತವಾಗಿ ವಾಹನ ಸೌಲಭ್ಯ ಒದಗಿಸಲಾಗುವುದು.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9535123168 ಅಥವಾ 9741864013 ಸಂಪರ್ಕಿಸಬಹುದು.

- Advertisement -

Related news

error: Content is protected !!