Thursday, June 18, 2026
spot_imgspot_img
spot_imgspot_img

ಯೋಧನನ್ನು ಥಳಿಸಿ ಬೆನ್ನಿನಲ್ಲಿ ಪಿಎಫ್‌ಐ ಬರೆದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! ತನಿಖೆಯಲ್ಲಿ ಸತ್ಯ ಬಯಲು

- Advertisement -
- Advertisement -

ಕೇರಳ : ಆರು ಮಂದಿ ಕಿಡಿಗೇಡಿಗಳು ತನ್ನನ್ನು ಅಪಹರಿಸಿ, ಥಳಿಸಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದಿರುವುದಾಗಿ ದೂರು ನೀಡಿದ್ದ ಯೋಧ ಶೈನ್‌ ಕುಮಾರ್‌ ಹಾಗೂ ಗೆಳೆಯನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ತಾನು ಫೇಮಸ್‌ ಆಗಬೇಕು ಎಂಬ ಉದ್ದೇಶದಿಂದ ಯೋಧ ಶೈನ್‌ ಕುಮಾರ್‌ ಈ ಕಥೆಯನ್ನು ಕಟ್ಟಿದ್ದಾನೆ ಎಂದು ಗೆಳೆಯ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಕುಮಾರ್‌ ಮನೆಯ ಸಮೀಪದ ರಬ್ಬರ್‌ ತೋಟದೊಳಗೆ ಹೋಗಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದು, ಥಳಿಸುವಂತೆ ಗೆಳೆಯನಿಗೆ ಸೂಚಿಸಿದ್ದ ಈ ವೇಳೆ ಗೆಳೆಯ ಮದ್ಯದ ಮತ್ತಿನಲ್ಲಿದ್ದ ಗೆಳೆಯ ಡಿಎಫ್‌ ಐ ಅಂತ ಬರೆದಿದ್ದ, ಆದರೆ ಕುಮಾರ್‌ ಪಿಎಫ್‌ ಐ ಎಂದು ಬರೆಯುವಂತೆ ಸೂಚಿಸಿ ನಂತರ ತನಗೆ ಹೊಡೆಯುವಂತೆ ಹೇಳಿದ್ದ. ಮದ್ಯ ಸೇವಿಸಿದ್ದರಿಂದ ತನಗೆ ಹೊಡೆಯಲು ಆಗಲಿಲ್ಲ. ಆಗ ಕುಮಾರ್‌ ನೆಲದ ಮೇಲೆ ಹಾಕಿ ಎಳೆದೊಯ್ಯುವಂತೆ ಹೇಳಿದ. ಅದೂ ಕೂಡಾ ತನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಕೈಯನ್ನು ಹಿಂದಕ್ಕೆ ಕಟ್ಟಿ, ಬಾಯಿಗೆ ಟೇಪ್‌ ಹಾಕಿ ತೆರಳುವಂತೆ ಹೇಳಿದ್ದ ಎಂಬುದಾಗಿ ಗೆಳೆಯ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!