Saturday, May 15, 2021
spot_imgspot_img
spot_imgspot_img

ಬಿಗ್‍ಬಾಸ್ ಜರ್ನಿ ಮುಗಿಸಿದ ಅತ್ಯಂತ ಕಿರಿಯ ಸ್ಪರ್ಧಿ ವಿಶ್ವನಾಥ್!

- Advertisement -
- Advertisement -

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯ ಮೇಲೆ ವೀಕ್ಷಕರ ಗಮನ ಹೆಚ್ಚಾಗಿತ್ತು. ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದಾದರೆ ಬಿಗ್‍ಬಾಸ್ ಎಲಿಮಿನೇಷನ್ ಪ್ರಕ್ರೀಯೆ ಹೇಗೆ ನಡೆಯುತ್ತದೆ. ಯಾರು ಮನೆಯಿಂದ ಹೊರಗೆ ಬರುತ್ತಾರೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಬಿಗ್‍ಬಾಸ್ ಮನೆಯ ಗಾಯಕ, ಅತ್ಯಂತ ಕಿರಿಯ ಸ್ಪರ್ಧಿ ಎನಿಸಿಕೊಂಡಿರುವ ವಿಶ್ವನಾಥ್ ಮನೆಯಿಂದ ಆಚೆ ಬಂದಿದ್ದಾರೆ.

ವಿಶ್ವನಾಥ್ ಬಿಗ್‍ಬಾಸ್ ಜರ್ನಿಯನ್ನು ಮುಗಿಸಿದ್ದಾರೆ. ವಿಶ್ವನಾಥ್ ಮೊದಲಿನಿಂದಲು ಚೆನ್ನಾಗಿ ಆಟ ಆಡಿಕೊಂಡು ಬೇರೆಯವರಿಗೆ ಸ್ಪರ್ಧೆ ಕೊಡುತ್ತಾ ಬಂದಿದ್ದರು. ಇದ್ದ 7 ವಾರಗಳ ಕಾಲವು ಉಳಿದ ಸ್ಪರ್ಧಿಗಳಿಗೆ ಸರಿ ಸಮಾನವಾಗಿ ಪೈಪೋಟಿ ಕೊಡುತ್ತಾ ಬಂದಿದ್ದರು. ಒಂದು ವಾರದ ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ ಕಳೆದ 2 ವಾರಗಳಿಂದ ಆ್ಯಕ್ಟೀವ್ ಆಗಿ ಇರಲಿಲ್ಲ ಹೀಗಾಗಿ ಬಿಗ್‍ಬಾಸ್ ಮನೆಯಿಂದ ವಿಶ್ವ ಹೊರಬಂದಿದ್ದಾರೆ.

ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಟ್, ಚಂದ್ರಕಲಾ, ಶಂಕರ್ ಅಶ್ವಥ್ ಈ ಹಿಂದೆ ಮನೆಯಿಂದ ಹೊರಬಂದಿದ್ದರು. ಇದೀಗ ಗಾಯಕ ವಿಶ್ವನಾಥ್‍ಗೆ ಬಿಗ್‍ಬಾಸ್ ಜರ್ನಿ ಮುಕ್ತಾಯವಾಗಿದೆ. ಹಿಂದಿನ ವಾರ ಶಮಂತ್ ಮನೆಯಿಂದ ಆಚೆಹೋಗಬೇಕಿತ್ತು. ಆದರೆ ಅದೃಷ್ಟವಶಾತ್ ಬಚಾವ್ ಆಗಿದ್ದರು. ಆದರೆ ಎಲಿಮಿನೇಷನ್‍ನಲ್ಲಿ ಶಮಂತ್ ಹೋಗುತ್ತಾರೆ ಎನ್ನುವ ಅನುಮಾನ ಇತ್ತು. ಆದರೆ ವಿಶ್ವನಾಥ್ ಅವರಿಗೆ ಬಿಗ್‍ಬಾಸ್ ಜರ್ನಿ ಮುಕ್ತಾಯವಾಗಿದೆ.

ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಅದಕ್ಕೆ ಬಿಗ್ ಬಾಸ್ ವಿಶೇಷ ಪ್ಲಾನ್ ಮಾಡಿದ್ದರು. ಒಂದೊಂದು ಚಟುವಟಿಕೆ ಮೂಲಕ ಒಬ್ಬೊರನ್ನು ಬಿಗ್ ಬಾಸ್ ಸೇಫ್ ಮಾಡಲಿದ್ದಾರೆ. ಕೊನೆಗೆ ಯಾವ ಸ್ಪರ್ಧಿಯ ಜರ್ನಿ ವೀಡಿಯೋ ಪ್ಲೇ ಆಗುತ್ತದೆಯೋ, ಆ ಸ್ಪರ್ಧಿ ಇಂದು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿದ್ದರು. ವಿಶ್ವನಾಥ್ ಅವರ ಜರ್ನಿ ವೀಡಿಯೋ ಪ್ಲೇ ಆಗಿದೆ.

ವಿಶ್ವನಾಥ್ ಸಿಂಗರ್ ಅವರು ಪ್ರತಿಭೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ, ಇನ್ನಷ್ಟು ಮನರಂಜನೆಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದರೆ ವೀಕ್ಷಕರ ವೋಟ್ ಬರಹುದಿತ್ತು. ಒಟ್ಟಾರೆಯಾಗಿ ವಿಶ್ವಾನಾಥ್ ಇರುವಷ್ಟು ದಿನ ಸಖತ್ ಎಂಜಾಯ್ ಮಾಡಿದ್ದಾರೆ. ಯಾರೋಂದಿಗೂ ದ್ವೇಷ ಕಟ್ಟಿಕೊಳ್ಳದೆ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಮುಂದಿನ ವಾರ ಯಾರ ಆಟವನ್ನು ಬಿಗ್‍ಬಾಸ್‍ ಮುಗಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!