Saturday, June 13, 2026
spot_imgspot_img
spot_imgspot_img

ಬೈಕಂಪಾಡಿ: ರೈಲು ಹಳಿಯ ಮೇಲೆ ಕೊಲೆಗೈದ ಸ್ಥಿತಿಯಲ್ಲಿ ಶವ ಪತ್ತೆ!

- Advertisement -
- Advertisement -

ಬೈಕಂಪಾಡಿ: ಬೈಕಂಪಾಡಿ ಬಳಿಯ ಕೈಗಾರಿಕಾ ವಲಯದಲ್ಲಿ ಹಾದುಹೋಗುವ ರೈಲ್ವೆ ಹಳಿಯ ಮೇಲೆ ಕೂಲಿ ಕಾರ್ಮಿಕನೊಬ್ಬನ ಶವ ಕತ್ತುಕೊಯ್ದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.

driving

ಮೃತನನ್ನು ಬಾಗಲಕೋಟೆ ಮೂಲದ ಎಲ್ಲಪ್ಪ (47)ಎಂದು ಗುರುತಿಸಲಾಗಿದೆ. ರವಿವಾರ ರಾತ್ರಿ ಯಾವುದೋ ವಿಚಾರಕ್ಕೆ ಜಗಳವಾಗಿ ಕೊಲೆಗೈದಿರುವ ಸಾಧ್ಯತೆಯಿದೆ.

ಸೋಮವಾರ ಬೆಳಿಗ್ಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಶವ ಕಂಡು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕೊಲೆ ಶಂಕೆಯಾಗಿರುವುದರಿಂದ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.

- Advertisement -

Related news

error: Content is protected !!