Tuesday, August 25, 2026
spot_imgspot_img
spot_imgspot_img

ಬೈಕ್- ಆಟೋ ಡಿಕ್ಕಿ; ಇಬ್ಬರು ಮೃತ್ಯು..!

- Advertisement -
- Advertisement -

ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ದಂಡಿನ ಕುರುಬರ ಹಟ್ಟಿ ಬಳಿ ನಡೆದಿದೆ.

ಮೃತಪಟ್ಟವರು ಆಟೋ ಡ್ರೈವರ್ ಬರ್ಖತ್, ಶಿಲ್ಪಾ ಎಂದು ಗುರುತಿಸಲಾಗಿದೆ ಹಾಗೂ ಬೈಕ್ ಸವಾರನ ಕೈ ಮೂಳೆ ಮುರಿದಿದೆ.

ಚಿತ್ರದುರ್ಗದಿಂದ ಚಳ್ಳಕೆರೆಗೆ ಹೊರಟಿದ್ದ ಆಟೋ ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಮೃತದೇಹವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!