Sunday, April 28, 2024
spot_imgspot_img
spot_imgspot_img

ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಖರೀದಿದಾರನಿಂದ ಮೋಸ ಹೋದ ಬೈಕ್ ಮಾಲೀಕ; ಟೆಸ್ಟ್ ಡ್ರೈವ್ ನೆಪದಲ್ಲಿ ಎಸ್ಕೇಪ್‌..!!

- Advertisement -G L Acharya panikkar
- Advertisement -

ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಬೈಕ್‌ ಖರೀದಿಗೆಂದು ಬಂದು ಟೆಸ್ಟ್‌ ಡ್ರೈವ್‌ ನೆಪದಲ್ಲಿ ಬೈಕ್‌ ಜೊತೆ ಎಸ್ಕೇಪ್‌ ಆದ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ತಾಡಿಯಲ್ಲಿ ನಡೆದಿದೆ.

ಕೆಟಿಎಂ ಬೈಕ್‌ ಮಾರಾಟಕ್ಕಿದೆ ಎಂದು ಓಎಲ್‌ಎಕ್ಸ್‌ನಲ್ಲಿ ಪೋಟೋ ಹಾಕಿದ್ದನ್ನು ಗಮನಿಸಿದ ಖದೀಮ ಇನ್ಸ್ಟಾಗ್ರಾಂ ಮೂಲಕ ಸಂಪರ್ಕಿಸಿ ಬೈಕ್‌ ಖರೀದಿಗೆಂದು ಶಿರ್ತಾಡಿಗೆ ಬಂದು ಬೈಕ್‌ ನೋಡಿದ್ದಾನೆ. ಬಳಿಕ ಟೆಸ್ಟ್‌ ಡ್ರೈವ್‌ ನೆಪದಲ್ಲಿ ಬೈಕ್‌ನ್ನು ವಾಲ್ಪಾಡಿ ಕಡೆಗೆ ಕೊಂಡೊಯ್ದಿದ್ದು ವಾಪಾಸು ಬಾರದೇ ನಾಪತ್ತೆಯಾಗಿದ್ದಾನೆ.

ಈ ಕುರಿತು ಬೈಕ್‌ ಮಾಲೀಕ ದೂರು ದಾಖಲಿಸಿದ್ದು, ಎಲ್ಲಿಯಾದರೂ ಬೈಕ್‌ ಕಂಡಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!