Tuesday, April 30, 2024
spot_imgspot_img
spot_imgspot_img

ಬಟ್ಟೆ ಮೇಲೆ ಮೋದಿ ಚಿತ್ರ; ಪದ್ಮಶ್ರೀ ಪುರಸ್ಕೃತರ ಉಡುಗೊರೆ ಪಡೆದ ಪ್ರಧಾನಿಗೆ ಎಲ್ಲಿಲ್ಲದ ಸಂತೋಷ..!

- Advertisement -G L Acharya panikkar
- Advertisement -

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿರನ್ ಕುಮಾರ್ ಬಸಕ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೊಂದು ವಿಶೇಷ ಉಡುಗೊರೆ ನೀಡಿದ್ದಾರೆ. ಪದ್ಮಶ್ರೀ ಪುರಸ್ಕಾರ ನೀಡುವ ಸಮಯದಲ್ಲಿ ಬಟ್ಟೆ ನೇಕಾರರಾಗಿರುವ ಬಿರನ್ ಕುಮಾರ್ ಮೋದಿ ಭಾವಚಿತ್ರವಿರುವ ಬಟ್ಟೆಯನ್ನು ಪ್ರಧಾನಿಗೆ ನೀಡಿದ್ದಾರೆ. ಈ ಬಟ್ಟೆಯ ಮೇಲೆ ಪ್ರಧಾನಿ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಕುಸುರಿ ಮಾಡಿದ್ದು ತುಂಬ ಗಮನಸೆಳೆಯುತ್ತಿದೆ.

ಅದನ್ನು ನೋಡಿ ನರೇಂದ್ರ ಮೋದಿಯವರು ಖುಷಿಯಾಗಿ, ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಬಿರನ್ ಕುಮಾರ್ ಬಸಕ್ ಅವರು ಪಶ್ಚಿಮ ಬಂಗಾಳದ ನಾದಿಯಾದವರು. ಅವರೊಬ್ಬ ಹೆಸರಾಂತ ನೇಕಾರರು. ಸೀರೆಗಳ ಮೇಲೆ ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆಯ ಚಿತ್ರಗಳನ್ನು ಚಿತ್ರಿಸುವುದು ಅವರ ವಿಶೇಷತೆ. ಈ ಬಾರಿ ಪದ್ಮಶ್ರೀ ಪುರಸ್ಕೃತರಾಗಿದ್ದು, ನಾನು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಸೀರೆ ಉಡುಗೊರೆಯನ್ನಾಗಿ ನೀಡಿದರು. ನನಗಂತೂ ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.

- Advertisement -

Related news

error: Content is protected !!