Sunday, June 14, 2026
spot_imgspot_img
spot_imgspot_img

ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!!

- Advertisement -
- Advertisement -
vtv vitla

ರಾಂಚಿ: ಹಲವು ವರ್ಷಗಳಿಂದ ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ದಂಪತಿಗಳಿಗೆ ಏಕಕಾಲಕ್ಕೆ ಐದು ಶಿಶುಗಳು ಜನಿಸಿವೆ.

ವಿವಾಹದ ಬಳಿಕ ಹಲವು ವರ್ಷ ಮಕ್ಕಳಾಗದ ಕಾರಣ ಕುಟುಂಬಸ್ಥರು ಚಿಂತಿತರಾಗಿದ್ದರು. ಮಹಿಳೆ ಕೆಲವು ದೈಹಿಕ ನ್ಯೂನತೆಗಳಿಂದ ಬಳಲುತ್ತಿದ್ದರು. ಇದರಿಂದ ಗರ್ಭ ಧರಿಸಲು ತೊಂದರೆಯಾಗಿತ್ತು. ಇದಕ್ಕಾಗಿ ಆಕೆ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಇದಾದ ಬಳಿಕ ಆಕೆ ಗರ್ಭಿಣಿಯಾಗಿದ್ದು, 7ತಿಂಗಳಲ್ಲಿ ಐದು ಮಕ್ಕಳಿಗೆ ರಿಮ್ಸ್‌ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.

ರಿಮ್ಸ್ ಆಸ್ಪತ್ರೆಯ ಡಾ.ಶಶಿಬಾಲಾ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಸಾಮಾನ್ಯ ಹೆರಿಗೆಯಾಗಿ ಐದು ಮಕ್ಕಳು ಜನಿಸಿದ್ದಾರೆ. ಇದು ಆಸ್ಪತ್ರೆಯ ವೈದ್ಯರು ಮತ್ತು ಕುಟುಂಬಸ್ಥರಿಗೆ ಅಚ್ಚರಿಯ ಜೊತೆಗೆ ಸಂತೋಷ ತಂದಿದೆ. ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಐದು ಮಕ್ಕಳು ಏಕಕಾಲದಲ್ಲಿ ಜನಿಸಿದ್ದರೆ. ಅಷ್ಟು ಮಕ್ಕಳ ಪಡೆದ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ವೈದ್ಯರ ಪ್ರಕಾರ, ತಾಯಿಯ ಸ್ಥಿತಿ ಸಾಮಾನ್ಯವಾಗಿದೆ. ಆದರೆ, ಮಕ್ಕಳು ಸಾಮಾನ್ಯಕ್ಕಿಂತ ತುಸು ಕಡಿಮೆ ಗಾತ್ರ ಹೊಂದಿದ್ದು, ಪ್ರಸ್ತುತ ವೈದ್ಯರ ಮೇಲ್ವಿಚಾರಣೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

- Advertisement -

Related news

error: Content is protected !!