Friday, April 26, 2024
spot_imgspot_img
spot_imgspot_img

ಬಿಜೆಪಿಯು ರಾಷ್ಟ್ರ ಕಟ್ಟುವ ಕೈಂಕರ್ಯ ನಿರ್ವಹಿಸುತ್ತಿದೆ-ಕೋಟ ಶ್ರೀನಿವಾಸ ಪೂಜಾರಿ.

- Advertisement -G L Acharya panikkar
- Advertisement -

ಬಂಟ್ವಾಳ: ಬಿಜೆಪಿಯು ಕೇವಲ ರಾಜಕೀಯ ಉದ್ದೇಶದಿಂದ ಕೆಲಸ ಮಾಡದೆ ರಾಷ್ಟ್ರ ಕಟ್ಟುವ ಕೈಂಕರ್ಯ ನಿರ್ವಹಿಸುತ್ತಿರುವುದರಿಂದ ನಾವು ಬಿಜೆಪಿ ಕಾರ್ಯಕರ್ತರು ಎನ್ನಲು ಹೆಮ್ಮೆ ಇದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ರವಿವಾರ ಕಲ್ಲಡ್ಕ ಏಡ್ಲ ಪದ್ಮಾಂಗಣದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಎರಡು ಗ್ರಾಮಗಳ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿದವರಿಗೆ ಗೌರವಿಸುವ ಕಾರ್ಯದ ಮೂಲಕವೇ ನಾವು ಪಕ್ಷದ ಕಾರ್ಯವನ್ನು ಆರಂಭಿಸುತ್ತೇನೆ. ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಗೋಳ್ತಮಜಲಿನಲ್ಲಿ ಪ್ರತಿ ವಾರ್ಡ್ ನಲ್ಲೂ ಬಿಜೆಪಿ ಸಿದ್ಧಾಂತ ಒಳಗೊಂಡಿರುವವರು ಅಧಿಕಾರದಲ್ಲಿರುವಂತೆ ನಾವು ಕೆಲಸ ಮಾಡಬೇಕಿದೆ. ಬಂಟ್ವಾಳ ಕ್ಷೇತ್ರವು ವಿಭೀಷಣ ರಾಜ್ಯವಾಗಲು ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ಅವರು ಅಧಿಕಾರಕ್ಕೆ ಬಂದಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಮಾತನಾಡಿ, ೧೮ ಕೋಟಿ ಬಿಜೆಪಿ ಕಾರ್ಯಕರ್ತರಿರುವ ಕುಟುಂಬದ ಸದಸ್ಯ ಎನ್ನುವುದಕ್ಕೆ ಹೆಮ್ಮೆ ಇದೆ. ಬಿಜೆಪಿಗೆ ಶಕ್ತಿಕೊಟ್ಟ ಗ್ರಾಮವಾಗಿ ಗೋಳ್ತಮಜಲು ಗ್ರಾಮ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಅನುದಾನದ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಶಾಂತಿಯುತ ಬಂಟ್ವಾಳವೇ ನನ್ನ ಸಾಧನೆ ಎನ್ನುವ ಹೆಮ್ಮೆ ಇದೆ ಎಂದರು.


ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ನಮ್ಮನ್ನು ಭಾರತೀಯರು ಎಂದು ಪರಿಗಣಿಸದೇ ಬರೀ ಧರ್ಮದ ಆಧಾರದಲ್ಲಿ ವಿಭಾಗಿಸುತ್ತಿದ್ದರು. ಪ್ರಧಾನಿ ಮೋದಿಯವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಗ್ರಾ.ಪಂ.ನಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸಬೇಕಿದೆ ಎಂದರು.


ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಪ್ರಸ್ತಾವನೆಗೈದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಜಿ.ಪಂ.ಸದಸ್ಯರಾಸ ತುಂಗಪ್ಪ ಬಂಗೇರ, ಪೂಜಾರಿ, ರವೀಂದ್ರ ಕಂಬಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಜಿಲ್ಲಾ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಯುವ ಮೋರ್ಚಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ, ಡೊಂಬಯ್ಯ ಅರಳ, ಕ್ಷೇತ್ರ ಉಪಾಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ರೊನಾಲ್ಡ್ ಡಿಸೋಜ, ಕೋಶಾಧಿಕಾರಿ ಪ್ರಕಾಶ್ ಅಂಚನ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಜೋಯ್ಲಾಸ್ ಡಿಸೋಜ, ಕ್ಷೇತ್ರ ಕಾರ್ಯದರ್ಶಿ ಸೀತಾರಾಮ ಪೂಜಾರಿ, ಹರ್ಷಿಣಿ, ತಾ.ಪಂ.ಸದಸ್ಯರಾದ ಮಹಾಬಲ ಆಳ್ವ, ಪ್ರಭಾಕರ ಪ್ರಭು, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಗಳಾದ ಪುರುಷೋತ್ತಮ ಶೆಟ್ಟಿ, ರಮನಾಥ ರಾಯಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಆನಂದ ಎ.ಶಂಭೂರು, ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮೊದಲಾದವರಿದ್ದರು.


ಗೋಳ್ತಮಜಲು ಗ್ರಾ.ಪಂ. ನಿಕಟಪೂರ್ವ ಸದಸ್ಯ ಎಲಿಯಾಸ್ ಡಿಸೋಜ ಅವರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮಾಜದ ಬಂಧುಗಳು ಬಿಜೆಪಿಗೆ ಸೇರ್ಪಡೆಗೊಂಡರು.
ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರು ಗ್ರಾ.ಪಂ.ಅನುದಾನದ ವಿವರ ನೀಡಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Related news

error: Content is protected !!