Monday, June 22, 2026
spot_imgspot_img
spot_imgspot_img

ಫ್ರೆಂಡ್ಸ್ ಸರ್ಕಲ್, ಸೆರ್ಕಳ, ಕೊಳ್ನಾಡು ಮತ್ತು ಲಯನ್ಸ್ ಕ್ಲಬ್, ಮೂಲ್ಕಿ ಇದರ ನೇತೃತ್ವದಲ್ಲಿ ರಕ್ತದಾನ ಶಿಬಿರ

- Advertisement -
- Advertisement -

ಫ್ರೆಂಡ್ಸ್ ಸರ್ಕಲ್, ಸೆರ್ಕಳ. ಕೊಳ್ನಾಡು ಮತ್ತು ಲಯನ್ಸ್ ಕ್ಲಬ್, ಮೂಲ್ಕಿ ಇದರ ನೇತೃತ್ವದಲ್ಲಿ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಭಾಗಿತ್ವದಲ್ಲಿ ಕೊಳ್ನಾಡು ಗ್ರಾಮದ ಸೆರ್ಕಳ ಸರಕಾರಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ.ಹೆಚ್. ಉಸ್ಮಾನ್ ಸ್ವತ: ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸೋಂಕಿತ ಜನರಿಗೆ ರಕ್ತದ ಅನಿವಾರ್ಯತೆ ಎದುರಾಗಿದ್ದು ಇಂತಹ ಸ್ವಯಂ ಸೇವಾ ಸಂಘಟನೆಗಳು ರಕ್ತದಾನ ಶಿಬಿರ ನಡೆಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಬೇಕೆಂದು ಮಾಜಿ ಪಂ.ಸದಸ್ಯ ಸಿ.ಹೆಚ್. ಅಬೂಬಕ್ಕರ್ ಹೇಳಿದರು.

ಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಸಹಕರಿಸಿದರು. ಎಸ್.ಕೆ.ಜುಬೈರ್, ಎಸ್.ಬಿ.ಫಾರೂಕ್, ಇಂತಿಯಾಝ್, ಎಸ್.ಕೆ.ರಹಿಮಾನ್, ಸುಧಾಕರ್ ಶೆಟ್ಟಿ, ಬಾಲಕೃಷ್ಣ ಸೆರ್ಕಳ ಶಿಬಿರ ಆಯೋಜಿಸುವಲ್ಲಿ ನೇತೃತ್ವ ವಹಿಸಿದ್ದರು.

- Advertisement -

Related news

error: Content is protected !!