- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು ಅಧಿಕಾರ ಸ್ವೀಕರಿಸಿದ್ರು. ನಿರ್ಗಮನ ಕಮಿಷನರ್ ಭಾಸ್ಕರ್ ರಾವ್ ಬ್ಯಾಟನ್ ಬದಲಾಯಿಸಿಕೊಳ್ಳುವ ಮೂಲಕ ಕಮಲ್ ಪಂತ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ರು. ಈ ವೇಳೆ ನಿರ್ಗಮನ ಕಮಿಷನರ್ ಭಾಸ್ಕರ್ ರಾವ್ ಭಾವುಕರಾದ್ರು.


ಚೇಂಬರ್ ಗೆ ಕೈ ಮುಗಿದು ತಲೆಬಾಗಿ ನಮಸ್ಕರಿಸುತ್ತಾ, ಕಣ್ಣೀರು ಹಾಕಿದ್ರು. ಬಳಿಕ ಬೆಂಗಳೂರು ಜನತೆಗೆ ನಮಸ್ಕರಿಸಿ ನಿರ್ಗಮಿಸಿದ್ರು. ಇದಕ್ಕೂ ಮೊದಲು ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಭಾಸ್ಕರ್ ರಾವ್, ಮಹಿಳಾ ಡಿಸಿಪಿ ಹಾಗೂ ಎಸಿಪಿಗಳ ಮನವಿ ಮೇರೆಗೆ ಫೋಟೋಶೂಟ್ ನಲ್ಲಿ ಪಾಲ್ಗೊಂಡರು. ಕೆಎಸ್ ಆರ್ ಪಿ ತುಕಡಿ ವಾದ್ಯ ತಂಡದಿಂದ ಕಮಲ್ ಪಂತ್ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ್ರು.


- Advertisement -