Tuesday, April 20, 2021
spot_imgspot_img
spot_imgspot_img

ಬೋಳಂತೂರು: ತಾಳಿತ್ತನೂಜಿಯಲ್ಲಿ ಎಪ್ರಿಲ್ 9 ಶುಕ್ರವಾರದಂದು ಖಾಝಿ ಸ್ವೀಕಾರ ಸಮಾರಂಭ

ಬೋಳಂತೂರು: ಬದ್ರಿಯಾ ಜಮಾ ಮಸೀದಿ ತಾಳಿತ್ತನೂಜಿ ಹಾಗೂ ಎಸ್ಸೆಸ್ಸೆಫ್ ತಾಳಿತ್ತನೂಜಿ ಶಾಖೆ ಇದರ ಜಂಟಿ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕ, ಖಾಝಿ ಸ್ವೀಕಾರ ಸಮಾರಂಭ,ಬುರ್ದಾ ಮಜ್ಲಿಸ್, ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮವು ಇದೇ ಎಪ್ರಿಲ್ 9 ಶುಕ್ರವಾರ ನಡೆಯಲಿದೆ.

ಅಂದು ಜುಮಾ ನಮಾಝ್ ಬಳಿಕ ನಡೆಯುವ ಖಾಝಿ ಸ್ವೀಕಾರ ಸಮಾರಂಭದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರನ್ನು ಖಾಝಿಯಾಗಿ ಬೈ‌ಅತ್ ಮಾಡುವ ಕಾರ್ಯಕ್ರಮ ಇರುತ್ತದೆ. ಉಳಿದ ಕಾರ್ಯಕ್ರಮಗಳು ಮಗ್ರಿಬ್ ನಮಾಝ್ ನಂತರ ನಡೆಯುತ್ತದೆ,ಸಯ್ಯಿದ್ ತ್ವಾಹಾ ತಂಙಳ್ ಹಾಗೂ ಶಾಹಿನ್ ಬಾಬು ತಾನೂರು ತಂಡದಿಂದ ಆಕರ್ಷಕ ಬುರ್ದಾ ಆಲಾಪನೆ ನಡೆಯಲಿದೆ,ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದುಆ ನಡೆಸಿಕೊಡುವರು,ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಬೇಕಲ್ ಉಸ್ತಾದರ ಅನುಸ್ಮರಣಾ ಭಾಷಣ ನಡೆಸಿಕೊಡುವರು,ಬಿ ಎನ್ ಅಬ್ದುಲ್ ಖಾದರ್ ಮದನಿ ಉದ್ಯಾವರ ಖಾಝಿ ಶಿರೋ ವಸ್ತ್ರದಾನ ಮಾಡುವರು,ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

MOST POPULAR

HOT NEWS

Related news

error: Content is protected !!