Friday, March 29, 2024
spot_imgspot_img
spot_imgspot_img

ಬಾಲಿವುಡ್ ನಟ ಸೋನು ಸೂದ್ ವಿರುದ್ಧ ದೂರು ದಾಖಲು!

- Advertisement -G L Acharya panikkar
- Advertisement -

ಮುಂಬೈ: ಬಾಲಿವುಡ್​ ನಟ ಸೋನು ಸೂದ್​​ ವಿರುದ್ಧ ಬೃಹನ್ ಮುಂಬೈ ಕಾರ್ಪೊರೇಷನ್​​ (ಬಿಎಂಸಿ) ಪೊಲೀಸರಿಗೆ ದೂರು ನೀಡಿದೆ. ಸೋನು ಸೂದ್​ ಬಿಎಂಸಿಯ ಅನುಮತಿ ಇಲ್ಲದೆ, ಜುಹು ನಲ್ಲಿ 6 ಮಹಡಿಯ ವಸತಿ ಕಟ್ಟಡವೊಂದನ್ನು ಹೊಟೇಲ್​​ ಆಗಿ ಪರಿವರ್ತಿಸಿದ್ದಾರೆ ಎಂದು ಪಾಲಿಕೆ ಆರೋಪ ಮಾಡಿದೆ.

ಜನವರಿ 4ರಂದು ಬಿಎಂಸಿ ಪೊಲೀಸ್​ ಕಂಪ್ಲೇಂಟ್​ ದಾಖಲಿಸಿದೆ. ಜುಹು ನ ಎ.ಬಿ ನಾಯರ್​ ರಸ್ತೆಯಲ್ಲಿರುವ ಶಕ್ತಿ ಸಾಗರ್​ ಹೆಸರಿನ ವಸತಿ ಕಟ್ಟಡವನ್ನು ಸೋನು ಸೂದ್​ ಹೊಟೇಲ್​ ಆಗಿ ಮಾಡಿದ್ದಾರೆ, ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಹೀಗಾಗಿ ಅನಧಿಕೃತ ಸೇರ್ಪಡೆ, ಮಾರ್ಪಾಡು ಮತ್ತು ಬಳಕೆದಾರರ ಬದಲಾವಣೆ ಆರೋಪಕ್ಕೆ ಮಹಾರಾಷ್ಟ್ರ ರೀಜನ್ ಆ್ಯಂಡ್​ ಟೌನ್ ಪ್ಲಾನಿಂಗ್ (ಎಂ.ಆರ್.ಟಿ.ಪಿ) ಕಾಯ್ದೆ ಅಡಿ ಸೋನು ಸೂದ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಎಂಸಿ ತನ್ನ ದೂರಿನಲ್ಲಿ ಮನವಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್​​ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದಿದ್ದಾರೆ. ಬಳಕೆದಾರರ ಬದಲಾವಣೆಗೆ ನಾನು ಈಗಾಗಲೇ ಬಿಎಂಸಿಯ ಅನುಮತಿ ಪಡೆದಿದ್ದೇನೆ. ಆದರೆ ಮಹಾರಾಷ್ಟ್ರ ಕೋಸ್ಟಲ್ ಝೋನ್ ಮ್ಯಾನೇಜ್​ಮೆಂಟ್​ ಆಥಾರಿಟಿಯಿಂದ ಅನುಮತಿ ಸಿಗುವುದು ಬಾಕಿ ಇತ್ತು. ಕೊರೊನಾ ಸಾಂಕ್ರಾಮಿಕದಿಂದಾಗಿ ಇನ್ನೂ ಕ್ಲಿಯರೆನ್ಸ್​ ಸಿಕ್ಕಿಲ್ಲ, ಅದಕ್ಕಾಗಿ ಕಾಯುತ್ತಿದ್ದೆನಷ್ಟೇ ಎಂದು ಹೇಳಿದ್ದಾರೆ.

- Advertisement -

Related news

error: Content is protected !!