Sunday, April 28, 2024
spot_imgspot_img
spot_imgspot_img

ಬಾಲಿವುಡ್ ನ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ; ಪತ್ನಿಯಿಂದ ದೂರು ದಾಖಲು!

- Advertisement -G L Acharya panikkar
- Advertisement -

ಬಾಲಿವುಡ್ ನ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್​ ವಿರುದ್ಧ ಅವರ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಚೀಫ್​ ಮೆಟ್ರೋಪಾಲಿಟನ್​​​ ಮ್ಯಾಜಿಸ್ಟ್ರೇಟ್​​ ತಾನಿಯಾ ಸಿಂಗ್​ ಯೋ ಯೋ ಹನಿ ಸಿಂಗ್​ಗೆ ನೋಟಿಸ್​ ಕಳುಹಿಸಿದ್ದು ನೋಯ್ಡಾದಲ್ಲಿರುವ ಜಂಟಿ ಒಡೆತನದ ಆಸ್ತಿಯಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಕ್ಕನ್ನು ಸೃಷ್ಟಿಸದಂತೆ ಹಾಗೂ ಪತ್ನಿಯ ಆಭರಣ ಸೇರಿದಂತೆ ಇತರೆ ಯಾವುದೇ ವಸ್ತುಗಳಿಗೆ ಹಾನಿ ಮಾಡದಂತೆ ಸೂಚಿಸಿದ್ದಾರೆ ಎಂದು ಶಾಲಿನಿ ಪರ ವಕೀಲರು ಹೇಳಿದ್ದಾರೆ.

ಹನಿ ಸಿಂಗ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿರುವ ಶಾಲಿನಿ ತಲ್ವಾರ್​, ತಮ್ಮ ಪತಿಯಿಂದಾಗಿ ತಾವು ಕಳೆದ 10 ವರ್ಷಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾಗಿರೋದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿಟ್ಲ: ಆ.5 ರಿಂದ 7 ರವರೆಗೆ ನೇಗಿಲ ನೆನಪು ಭತ್ತದ ಗದ್ದೆ ನಾಟಿ ಕಾರ್ಯಕ್ರಮ

ಯೋ ಯೋ ಹನಿ ಸಿಂಗ್​ ಸಾಕಷ್ಟು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಮದುವೆ ಫೋಟೋಗಳನ್ನು ನಾನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡೆ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದ ಎಂದು ತಲ್ವಾರ್​ ಆರೋಪಿಸಿದ್ದಾರೆ.

- Advertisement -

Related news

error: Content is protected !!