Monday, June 29, 2026
spot_imgspot_img
spot_imgspot_img

ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳು ಪತ್ತೆ; ಶಂಕಿತ ಆರೋಪಿಗಳ ಬಂಧನ

- Advertisement -
- Advertisement -

ಕೊಲ್ಕತಾದಲ್ಲಿ ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳನ್ನು ಸಾಗಿಸುತ್ತಿದ್ದು, ಆರೋಪಿಗಳು ಇದೀಗ ಸಿಐಡಿಯ ಬಾಂಬ್ ಸ್ಟ್ಯಾಡ್‌ನವರ ಬಲೆಗೆ ಬಿದ್ದಿದ್ದಾರೆ.

ಕೊಲ್ಕತಾದಿಂದ ಬಿಹಾರದ ಗಯಾಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದರಲ್ಲಿ 30 ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು, ಝಾರ್ಕಂಡಿನ ವ್ಯಕ್ತಿಯೊಬ್ಬನಿಗೆ ಇವು ರವಾನೆಯಾಗುತ್ತಿದ್ದ ಬಗ್ಗೆ ಮಾಹಿತಿಯಿದ್ದ ಚೀಟಿಯೂ ದೊರೆತಿದೆ ಎನ್ನಲಾಗಿದೆ.

ಖಾಸಗಿ ಬಸ್ ಒಂದರಲ್ಲಿ ಬಾಂಬ್‌ಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪಶ್ಚಿಮ ಬಂಗಾಳದ ಪೊಲೀಸರು ಮತ್ತು ಇಂಟೆಲಿಜೆನ್ಸ್ ಅಧಿಕಾರಿಗಳು,ಬಸ್‌ನ್ನು ನಿನ್ನೆ ರಾತ್ರಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಬ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿರಿಸಲಾಗಿದ್ದು, ಸಿಐಡಿ ಬಾಂಬ್ ಡಿಸ್ಟೋಸಲ್ ಸ್ಕ್ಯಾಡ್ ಸಿಬ್ಬಂದಿ ಎಲ್ಲಾ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿ, ವಶಪಡಿಸಿಕೊಂಡಿದ್ದಾರೆ.

ಸಿಐಡಿಯ ಬಾಂಬ್ ಸ್ಟ್ಯಾಡ್‌ನವರು ಸ್ಥಳಕ್ಕೆ ತಲುಪಿ, ಬಾಂಬ್ ಗಳನ್ನು ಡಿಫ್ಯೂಸ್ ಮಾಡಿದ್ದು, ಈ ಸಂಬಂಧವಾಗಿ ಕೆಲವು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!