






ಭಾರತ ಭಯೋತ್ಪಾದನೆ ನಿರ್ಮೂಲನೆಗೆ ಹೊಸ ಅಸ್ತ್ರ ಪ್ರಯೋಗಿಸಿದೆ. ಈ ಸಲ ಪಾಕಿಸ್ತಾನ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪೂರ್ಣವಿರಾಮ ಹಾಕಲು ಭಾರತ ಪ್ರಮುಖ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಲು ಕೇಂದ್ರ ಸರ್ಕಾರ 7 ಸರ್ವ ಪಕ್ಷ ನಿಯೋಗ ರಚಿಸಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಕಿರಣ್ ರಿಜಿಜು ಮಾಹಿತಿ ಸಚಿವ ಜಾಗತಿಕ ಮಟ್ಟದಲ್ಲಿ ಪಾಕ್ ಉಗ್ರ ಮುಖವಾಡ ಬಯಲು ಮಾಡಲು ಸರ್ವಪಕ್ಷ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಲಾಗುವುದು ಎಂದು.ಪ್ರಾದೇಶಿಕ ಬಣಗಳಾಗಿ ವಿಂಗಡಿಸಲಾದ ನಿಯೋಗಗಳು ಮೇ 22 ಅಥವಾ 23ರ ವೇಳೆಗೆ 10 ದಿನಗಳ ಕಾಲ ಪ್ರಯಾಣಿಸಲಿವೆ. ಸಂಸದರ ಜೊತೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿ ವಿಶ್ವದ ಮುಂದೆ ಪಾಕ್ನ ಮುಖವಾಡವನ್ನು ಕಳಚಿದ್ದಾರೆ. ಒಟ್ಟು 45 ಸಂಸದರು ವಿದೇಶಗಳಿಗೆ ಭೇಟಿ ನೀಡಿ ಪಾಕ್ ವಿರುದ್ಧ ಮಾತನಾಡಲಿದ್ದಾರೆ. ಕನಿಮೋಳಿ ಕರುಣಾನಿಧಿ ನೇತೃತ್ವದ ನಿಯೋಗವು ಸ್ಪೇನ್, ಗ್ರೀಕ್, ಸ್ಲೋವೇನಿಯ, ಲಾಟ್ವಿಯ, ರಷ್ಯಾಕ್ಕೆ ಭೇಟಿ ನೀಡಲಿದೆ. ಈ ನೀಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಏಳರಿಂದ ಎಂಟು ಸಂಸದರನ್ನು ಹೊಂದಿರುವ ಎಲ್ಲಾ ನಿಯೋಗವು ಸುಮಾರು ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.








