Friday, June 5, 2026
spot_imgspot_img
spot_imgspot_img

ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್..!

- Advertisement -
- Advertisement -

ಚಂಡೀಗಢ: ಪಿಸ್ತೂಲ್‌ಗಳನ್ನು ಹೊತ್ತು ಸಾಗುತ್ತಿದ್ದ ಪಾಕಿಸ್ತಾನದ ಡೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಹೊಡೆದುರುಳಿಸಿದೆ.

ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಮೂರು ಪಿಸ್ತೂಲ್‌ಗಳನ್ನು ಈ ಡ್ರೋನ್ ಸಾಗಿಸುತ್ತಿತ್ತು. ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡೋನ್ ಅನ್ನು ಗಮನಿಸಿದ ಕೂಡಲೇ ಗಡಿ ಭದ್ರತಾ ಪಡೆ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಾಜಿಲ್ಕಾ ಜಿಲ್ಲೆಯ ಮಹರ್ಸೋನಾ ಗ್ರಾಮದ ಕೃಷಿ ಹೊಲದಲ್ಲಿ ಚೀನಾ ನಿರ್ಮಿತ ಡ್ರೋನ್ ವಶಪಡಿಸಿಕೊಳ್ಳಲಾಗಿದೆ. ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪ್ಯಾಕೆಟ್‌ನಲ್ಲಿ ಮೂರು ಪಿಸ್ತೂಲ್‌ಗಳು ಮತ್ತು ಏಳು ಮ್ಯಾಗಜೀನ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!