Saturday, June 13, 2026
spot_imgspot_img
spot_imgspot_img

ಬಂಟ್ವಾಳ: ಕಟ್ಟಡ ಸಾಮಗ್ರಿಗಳ ಕಳವು ಪ್ರಕರಣ- ಓರ್ವನ ಬಂಧನ

- Advertisement -
- Advertisement -

ಬಂಟ್ವಾಳ : 9.23 ಲಕ್ಷ ರೂ. ಮೌಲ್ಯದ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ನ ಹೋಜೈ ತಾಲೂಕಿನ ನಜಿಮುದ್ದೀನ್ ಅವರ ಮಗ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿ.

ಪುದು ಗ್ರಾಮದ ಅಮ್ಮೆಮ್ಮಾರ್‌ ನಿವಾಸಿ ಸಿವಿಲ್‌ ಎಂಜಿನಿಯರ್‌ ಹಮ್ಮಬ್ಬ ಮರ್ಜೂಕ್‌ ಅವರ ಜತೆ ಕೆಲಸ ಮಾಡುತ್ತಿದ್ದ ಶರೂಪ್‌ ಆಲಂ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಹಮ್ಮಬ್ಬ ಅವರು ಬಿಲ್ಡಿಂಗ್‌ ಕೆಲಸಕ್ಕೆ ಉಪಯೋಗಿಸುತ್ತಿದ್ದ ಕಬ್ಬಿಣದ ಶೀಟು, ಜಾಕ್‌, ಸ್ಕಪೋಲ್ಡಿಂಗ್‌ ಇತ್ಯಾದಿಗಳನ್ನು ಅವರ ಮನೆಯ ಪಕ್ಕದ ಶೆಡ್‌ನ‌ಲ್ಲಿ ಇಡುತ್ತಿದ್ದರು. ನ. 24ರಂದು ಅವರು ಬೆಂಗಳೂರಿಗೆ ಹೋಗಿ 27ಕ್ಕೆ ಮರಳಿದ್ದರು. ನ. 29ರಂದು ಶೆಡ್‌ಗೆ ಹೋಗಿ ನೋಡಿದಾಗ ಸೊತ್ತುಗಳು ನಾಪತ್ತೆಯಾಗಿದ್ದವು. ವಿಚಾರಿಸಿದಾಗ ಆರೋಪಿ ಶರೂಪ್‌ ಆಲಂ ಟಾಟಾ ಏಸ್‌ ವಾಹನದ ಮೂಲಕ ಸೊತ್ತುಗಳನ್ನು ಸಾಗಿಸಿರುವುದು ಬೆಳಕಿಗೆ ಬಂದಿದೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿ ಮೊಹಮ್ಮದ್ ಶರೂಫ್ ಆಲಂ ಎಂಬಾತನನ್ನು ಡಿ.14 ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

- Advertisement -

Related news

error: Content is protected !!