MyHonda-India' ಡೌನ್ಲೋಡ್ ಮಾಡಿ, ಕೇವಲ ₹499ಕ್ಕೆ ಇಂಜಿನ್ ಆಯಿಲ್ ಸಹಿತ ಸರ್ವೀಸ್ ಪಡೆಯಿರಿ




ಪುತ್ತೂರು: ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ ಬಹುನಿರೀಕ್ಷಿತ “My Honda-India” ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಈ ಹೊಸ ಅಪ್ಲಿಕೇಶನ್ ಬಿಡುಗಡೆಯ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸರ್ವೀಸ್‌ನಲ್ಲಿ ದಾಖಲೆ ಬರೆದಿರುವ ಪುತ್ತೂರಿನ ತಿರುಮಲ ಹೋಂಡಾ (HMSI ಅಧಿಕೃತ ಶೋರೂಂ) ಗ್ರಾಹಕರಿಗೆ ಅದ್ಭುತ ಕೊಡುಗೆಯೊಂದನ್ನು ಘೋಷಿಸಿದೆ.
ಈ ವರದಿಯೊಂದಿಗೆ ನೀಡಿರುವ ಸ್ಕ್ಯಾನರ್ ಮೂಲಕ “MyHonda India” ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ತಿರುಮಲ ಹೋಂಡಾ ಶೋರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಕೇವಲ ₹499 ಕ್ಕೆ ಇಂಜಿನ್ ಆಯಿಲ್ ಸಹಿತ ಹೋಂಡಾ ಕಂಪೆನಿಯ ವಾಹನಗಳನ್ನು ತೊಳೆದು ಸರ್ವೀಸ್ ಮಾಡಿಕೊಡಲಾಗುವುದು ಎಂದು ತಿರುಮಲ ಮೋಟರ್ಸ್ ಮಾಲಕರಾದ ಕೃಷ್ಣಾ ಕಿಶೋರ್ ಎನ್.ಟಿ. ತಿಳಿಸಿದ್ದಾರೆ. ಗ್ರಾಹಕರು ಈ ವಿಶೇಷ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಸೆಕೆಂಡ್ ಹ್ಯಾಂಡದದದ ಖರೀದಿದಾರರ ಗಮನಕ್ಕೆ:
ಖರೀದಿಸಿದ ಸೆಕೆಂಡ್ ಹ್ಯಾಂಡ್ ಹೋಂಡಾ ವಾಹನದ ಸರ್ವಿಸ್ ಹಿಸ್ಟರಿಯಲ್ಲಿ ಹಳೆಯ ಮಾಲೀಕರ ಹೆಸರಿದ್ದರೆ, ಅಂತಹ ಗ್ರಾಹಕರು ಈ ಕೊಡುಗೆಯನ್ನು ಪಡೆಯಲು ತಿರುಮಲ ಹೋಂಡಾ ಶೋರೂಂಗೆ ಭೇಟಿ ನೀಡಿ. ಅಲ್ಲಿ ಸರ್ವಿಸ್ ಹಿಸ್ಟರಿಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಳಿಕ MyHonda India” ಅಪ್ಲಿಕೇಶನ್ ಡೌನ್ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ₹499 ರ ವಿಶೇಷ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.
ತಿರುಮಲ ಹೋಂಡಾವು ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ. ಕಡಬ, ಬೆಳ್ಳಾರೆ ಮತ್ತು ಸುಳ್ಯದಲ್ಲಿ ಶಾಖೆಗಳನ್ನು ಹೊಂದಿದ್ದು. ಈ ಎಲ್ಲಾ ಶಾಖೆಗಳಲ್ಲಿ ಈ ಸೇವೆಗಳು ಲಭ್ಯವಿದೆ.
"MyHonda India"- ಡಿಜಿಟಲ್ ಹೋಂಡಾ ಅನುಭವ:
“MyHonda India” ಅಪ್ಲಿಕೇಶನ್ ನಿಮ್ಮ ಹೋಂಡಾ ವಾಹನದ ಮಾಲೀಕತ್ವದ ಅನುಭವವನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿ ಪರಿವರ್ತಿಸಲಿದೆ. ಗ್ರಾಹಕರು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲವನ್ನೂ ತಮ್ಮ ಬೆರಳ ತುದಿಯಲ್ಲೇ ನಿರ್ವಹಿಸಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ.
"MyHonda India" ಅಪ್ಲೀಕೇಶನ್ ಡೌನ್ಲೋಡ್ ಮಾಡಲು ಈ ಕೆಳಗಿನ ಸ್ಕ್ಯಾನರ್ ಬಳಸಿ

ಕ್ರಾಂತಿಕಾರಿ 'ಹೋಂಡಾ ಒನ್ ಐಡಿ:ಈ ಅಪ್ಲಿಕೇಶನ್ನು ಪ್ರಮುಖ ವೈಶಿಷ್ಟ್ಯವೆಂದರೆ ಕ್ರಾಂತಿಕಾರಿ ಹೋಂಡಾ ಒನ್ ಐಡಿ’ (Honda One ID). ಇದು ಪ್ರತಿಯೊಬ್ಬ ಹೋಂಡಾ ಗ್ರಾಹಕರಿಗೆ ಒಂದೇ ವಾಹನ ಮಾಲೀಕತ್ವದ ಗುರುತು (One Vehicle Ownership Identity) ಇರಲು ಅವಕಾಶ ನೀಡುತ್ತದೆ. ಇದರಿಂದ ದಾಖಲೆಗಳ ನಿರ್ವಹಣೆ ಸರಳಗೊಂಡು, ಸಂಪೂರ್ಣ ಪ್ರಕ್ರಿಯೆಯ ಪಾರದರ್ಶಕವಾಗುತ್ತದೆ.
ಅಪ್ಲಿಕೇಶನ್ನ ಪ್ರಮುಖ ವೈಶಿಷ್ಟ್ಯಗಳು:
*ಉತ್ಪನ್ನಗಳ ಮಾಹಿತಿ (Explore Products): ಹೋಂಡಾದ ನೂತನ ಮಾದರಿಗಳು, ಅವುಗಳ
ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಸುಲಭವಾಗಿ ಹೋಲಿಕೆ ಮಾಡಿ ನೋಡಬಹುದು.
*ವಿಚಾರಣೆ ಮತ್ತು ಬೆಲೆ (Enquiry & Quotation): ನಿಮಗೆ ಬೇಕಾದ ವಾಹನದ ಬಗ್ಗೆ ತಕ್ಷಣವೇ
ವಿಚಾರಣೆ ಮಾಡಬಹುದು, ಆಫರ್ಗಳು ಮತ್ತು ಬೆಲೆ ಅಂದಾಜುಗಳನ್ನು ಪಡೆಯಬಹುದು.
*ಟೆಸ್ಟ್ ರೈಡ್ ಬುಕಿಂಗ್ (Test Ride Booking): ಕೆಲವು ಕ್ಲಿಕ್‌ಗಳಲ್ಲಿ ನಿಮ್ಮ ನೆಚ್ಚಿನ ಹೋಂಡಾ ವಾಹನದ ಟೆಸ್ಟ್ ರೈಡ್ಕ ಅಪಾಯಿಂಟೆಂಟ್ ನಿಗದಿಪಡಿಸಬಹುದು.
*ಹಣಕಾಸು ಸೌಲಭ್ಯ (Avail Finance): ಅರ್ಹತೆಯನ್ನು ಪರಿಶೀಲಿಸಿ, ತಕ್ಷಣವೇ ಸಾಲದ ಅನುಮೋದನೆಯನ್ನು ಪಡೆಯಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ.
*ಸೇವೆ ಬುಕ್ಕಿಂಗ್ ಮತ್ತು ಟ್ಯ್ರಾಕಿಂಗ್(Service Booking & Tracking): ಅಪಾಯಿಂಟೆಂಟ್ ಬುಕ್ ಮಾಡಬಹುದು ಮತ್ತು ನೈಜ ಸಮಯದಲ್ಲಿ ಅದರ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು. ನಿಮ್ಮ ವಾಹನ ಸರ್ವೀಸ್‌ನಲ್ಲಿ ಎಲ್ಲಿದೆ ಎಂದು ಫೋನ್‌ನಲ್ಲೇ ನೋಡಬಹುದು.
*ವೈಯಕ್ತಿಕಗೊಳಿಸಿದ ಅಧಿಸೂಚನೆಗಳು (Personalized Notifications): ಸಮಯೋಚಿತ ಎಚ್ಚರಿಕೆಗಳು, ಸೇವಾ ಜ್ಞಾಪನೆಗಳು, ಕೊಡುಗೆಗಳು ಮತ್ತು ಇತರ ಪ್ರಮುಖ ಮಾಹಿತಿಗಳು ನೇರವಾಗಿ ನಿಮ್ಮ ಮೊಬೈಲ್‌ಗೆ ಬರುತ್ತವೆ.
*ಅಪ್ಡೇಟ್‌ಗಳು(Engagement & Updates): HMSIನ ಇತ್ತೀಚಿನ ಸುದ್ದಿ, ವಿಶೇಷ ಕೊಡುಗೆಗಳು, CSR ಚಟುವಟಿಕೆಗಳು ಮತ್ತು ಸುರಕ್ಷತಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದು.
HMSIನ ಈ ಹೊಸ ಅಪ್ಲಿಕೇಶನ್ ಗ್ರಾಹಕರಿಗೆ ಸಂಪೂರ್ಣವಾಗಿ ಪಾರದರ್ಶಕ. ಅನುಕೂಲಕರ ಮತ್ತು ತಡರಹಿತ ಡಿಜಿಟಲ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿರುಮಲ ಹೋಂಡಾ ತಿಳಿಸಿದೆ. ಡಿಜಿಟಲ್ ಕಡೆಗೆ ಆಟೋಮೊಬೈಲ್ ಉದ್ಯಮದ ಈ ಹೆಜ್ಜೆ ಖಂಡಿತವಾಗಿಯೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ. ಇದು ಕಾಗದ ರಹಿತ ವ್ಯವಹಾರಗಳು ಮತ್ತು ವೇಗದ ಸೇವೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿಮ್ಮ ಹೋಂಡಾ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಇಂದೇ ಈ ಕೆಳಗೆ ನೀಡಲಾಗಿರುವ ಸ್ಕ್ಯಾನರ್ ಬಳಸಿ “My Honda India” ಅಪ್ಲಿಕೇಶನ್ ಡೌನೋಡ್ ಮಾಡಿಕೊಳ್ಳಿ. ಪುತ್ತೂರಿನ ಬೊಳ್ವಾರಿನಲ್ಲಿರುವ ತಿರುಮಲ ಹೋಂಡಾ ಶೋ ರೂಂಗ ಭೇಟಿ ನೀಡಿ ವಿಶೇಷ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಿ.








