Sunday, April 28, 2024
spot_imgspot_img
spot_imgspot_img

ಖಾಸಗಿ ಬಸ್​​ನಲ್ಲಿ ನಿಗೂಢ ಸ್ಪೋಟ; 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯ..!

- Advertisement -G L Acharya panikkar
- Advertisement -

ಖಾಸಗಿ ಬಸ್​ನಲ್ಲಿ ನಿಗೂಢ ಸ್ಪೋಟಗೊಂಡು 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ತುಮಕೂರಿನ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್​ ಹೊಂದಿದ್ದ ಖಾಸಗಿ ಬಸ್​ನಲ್ಲಿ ನಡೆದಿದೆ.

ಬಸ್ ತುಮಕೂರಿನಿಂದ ಕುಣಿಗಲ್​ ಕಡೆಗೆ ಹೋಗುತ್ತಿದ್ದಾಗ ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ. ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್​ ಬಾಟಲ್​ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್​ ದಿಢೀರ್​ ಸ್ಫೋಟಗೊಂಡಿದೆ. ಆ್ಯಸಿಡ್​ ಬಾಟಲ್​​​ ಸ್ಫೋಟಗೊಂಡ ಸದ್ದಿಗೆ ಒಂದು ಕ್ಷಣ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಆ್ಯಸಿಡ್​ ಒತ್ತಡ ಹೆಚ್ಚಾಗಿ ಬಾಟಲ್​ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!