- Advertisement -
- Advertisement -





ವಿಟ್ಲ: ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ ಮತ್ತು ಗೈಡ್ ವಿಭಾಗದ ಬೇಸಿಗೆ ಶಿಬಿರ ಜೇಸೀಸ್ ಪೆವಿಲಿಯನ್ ನಲ್ಲಿ “ಸ್ನೇಹ ಸಂಭ್ರಮ” ಮಾರ್ಚ್ 30 ರಿಂದ ಎಪ್ರಿಲ್ 02 ರ ತನಕ ನಡೆಯಲಿದ್ದು, ಈ ಶಿಬಿರದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯಕ್ ಸಿದ್ದಕಟ್ಟೆ ಇವರು ನೆರವೇರಿಸಿದರು.



ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಶೆಟ್ಟಿ.ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ, ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು, ನಿರ್ದೇಶಕಿ ಎಲ್ ಎನ್ ಕೂಡೂರು, ಮಾಜಿ ನಿರ್ದೇಶಕ ಮೋನಪ್ಪ ಶೆಟ್ಟಿ, ಸ್ಕೌಟ್ ಮತ್ತು ಗೈಡ್ ಶಿಕ್ಷಕಿಯರಾದ ವೀಣಾ, ಬಿಂದು, ಗಂಗಾ, ಶಶಿಕಲಾ, ನಿರ್ದೇಶಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


ಸ್ಕೌಟ್ ಮತ್ತು ಗೈಡ್ ಕ್ಯಾಪ್ಟನ್ ಜಯಶ್ರೀ ಕಾರ್ಯಕ್ರಮ ಸಂಯೋಜಿಸಿದರು.
- Advertisement -








