Sunday, July 26, 2026
spot_imgspot_img
spot_imgspot_img

*ಎರಡು ಕಾರುಗಳ ನಡುವೆ ಭೀಕರ ಅಪಘಾತ* *ಚರಂಡಿಗೆ ಉರುಳಿ ಬಿದ್ದ ಕಾರು*

- Advertisement -
- Advertisement -

ವಿಟ್ಲ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎಲ್ಲಾ ಪ್ರಯಾಣಿಕರು ಪವಾಢಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ವಿಟ್ಲದ ಕಾಸರಗೋಡು ರಸ್ತೆಯ ಕಾಶಿಮಠದಲ್ಲಿ ನಡೆದಿದೆ.

ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಬಂದ ಇನ್ನೊಂದು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಒಂದು ಕಾರು ಪಕ್ಕದ ಚರಂಡಿಗೆ ಉರುಳಿ ಬಿದ್ದರೆ, ಇನ್ನೊಂದು ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿದ್ದು, ಮುಂಭಾಗ ಸಂಪೂರ್ಣವಾಗಿ ನಜ್ಜಿಗುಜ್ಜಾಗಿದೆ.

ಎರಡು ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಿಟ್ಲ ಪೊಲೀಸರು ಬೇಟಿ ನೀಡಿ, ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟಿದ್ದಾರೆ.

- Advertisement -

Related news

error: Content is protected !!