Sunday, June 14, 2026
spot_imgspot_img
spot_imgspot_img

ಕಾರು ಮತ್ತು ಜೀಪಿನ ನಡುವೆ ಅಪಘಾತ; ಮಹಿಳೆ ಮೃತ್ಯು

- Advertisement -
- Advertisement -

ಕಾರು ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿ ಕೊಡಗಿನ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಕುಶಾಲನಗರದ ನಿವಾಸಿ ಬಿ.ಎಮ್. ಸುಬ್ಬಯ್ಯ ಎಂಬವರ ಪತ್ನಿ ನೇತ್ರಾವತಿ (29) ಮೃತ ದುರ್ದೈವಿ.

ಬಿ.ಎಮ್. ಸುಬ್ಬಯ್ಯ ತಮ್ಮ ಕಾರಿನಲ್ಲಿ ಅವರ ಪತ್ನಿ ನೇತ್ರಾವತಿ, ಪುತ್ರ ದಿವಿತ್, ಹಾಗೂ ಅಕ್ಕ ಮಾರ್ನಾಡು ನಿವಾಸಿ ಜಯಂತಿ ಎಂಬವರೊಂದಿಗೆ ಬೆಂಗಳೂರಿನಿಂದ ಕುಶಾಲನಗರಕ್ಕೆ ಬರುವ ಸಂದರ್ಭ ರಾಮನಗರದಲ್ಲಿ ಕಾರು ಮತ್ತು ಜೀಪಿನ ಮಧ್ಯೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಗಾಂಭೀರ ಗಾಯಗೊಂಡು ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.

ಆದರೆ ನೇತ್ರಾವತಿ ಮೃತಪಟ್ಟಿದ್ದು, ಬಿ.ಎಮ್ ಸುಬ್ಬಯ್ಯ(38), ಪುತ್ರ ಮೂರುವರೆ ವರ್ಷದ ದಿವಿತ್ ಮತ್ತು ಅಕ್ಕ ಜಯಂತಿ (40) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Related news

error: Content is protected !!