Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್‌ ಆತ್ಮಹತ್ಯೆ ಕೇಸ್‌: ಇಬ್ಬರ ಬಂಧನ

- Advertisement -
- Advertisement -

ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್‌ ಅವರು ಕೇಸ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್‌ ಅವರು ಈಚೆಗೆ ಆತ್ಮಹತ್ಯೆ ಗೆ ಶರಣಾಗಿದ್ದರು.

ಇದರ ಬೆನ್ನಲ್ಲೇ ಅತುಲ್‌ ಅವರ ಸಾವಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಹೆಚ್ಚಾಗಿತ್ತು.ಅತುಲ್‌ ಅವರು ಮಾಡಿರುವ ವಿಡಿಯೋ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ದೇಶದ ವಿವಿಧ ಭಾಗದಲ್ಲಿ ಈ ಕೇಸ್‌ಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಅತುಲ್‌ ಅವರ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಎನ್ನುವವ​ರನ್ನು ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಜೌನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಟೆಕ್ಕಿ ಸುದೀರ್ಘ ಪುಟಗಳ ಡೆತ್‌ನೋಟ್‌ ಬರೆದು ಆತ್ಮಹ*ಗೆ ಶರಣಾಗಿದ್ದರು. ಅವರು ಸಾವನ್ನಪ್ಪುವುದಕ್ಕೂ ಮೊದಲು ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಸಿಂಘಾನಿಯ ಹಾಗೂ ಅವರ ಕುಟುಂಬದವರೇ ಕಾರಣ ಎಂದು ದೂರಿದ್ದರು. ನಕಲಿ ದೂರು ದಾಖಲು ಮಾಡಿ ನನಗೆ ಕಿರುಕುಳ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು ಎನ್ನಲಾಗಿದೆ. ಈ ಪ್ರಕರಣವು ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು ಜಸ್ಟಿಸ್‌ ಫಾರ್‌ ಅತುಲ್ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.ಈ ನಡುವೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಿಶಾ ಸಿಂಘಾನಿಯಾ ಅವರು ಪರಾರಿಯಾಗಲು ಪ್ರಯತ್ನಿಸಿದ್ದರು ಎಂದು ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೆ ಆತ್ಮಹತ್ಯೆ ಗೆ ಶರಣಾದ ಅತುಲ್ ಅವರ ಪತ್ನಿ ನಿಖಿತಾ ಸಿಂಘಾನಿಯ ಸೇರಿದಂತೆ ನಾಲ್ವರಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ.ಈ ಕೇಸ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸರು ಪತ್ನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಆಕೆ ಸಹಕರಿಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, ನಿಖಿತಾ ಎನ್ನುವವರ ಮೇಲೆ ಬೆಂಗಳೂರು ಪೊಲೀಸರು ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.ಅತುಲ್ ತಾಯಿ ಗಂಭೀರ ಆರೋಪ: ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ದೇಶದಾದ್ಯಂತ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯಲ್ಲಿ ಇದೇ ಪ್ರಕರಣದಂತೆ ಮನನೊಂದಿರುವ ಪುರುಷರು ಸಹ ಭಾಗವಹಿಸುತ್ತಿದ್ದು, ನಕಲಿ ಸ್ತ್ರೀವಾದ ತಡೆಯಬೇಕು ಹಾಗೂ ಇದರಿಂದ ಪುರುಷರನ್ನು ರಕ್ಷಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅತುಲ್‌ ಅವರ ತಾಯಿ, ನನ್ನ ಮಗನಿಗೆ ಚಿತ್ರಹಿಂಸೆ ನೀಡಲಾಗಿದೆ. ಈ ರೀತಿ ಮಾಡಿರುವುದು ಕೊಲೆಗೆ ಸಮಾನವಾಗಿದೆ. ನನ್ನ ಮಗ ನಮಗೆ ನೋವಾಗುತ್ತೆ ಅಂತ ಯಾವುದನ್ನೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅವನನ್ನು ಹಿಂಸೆ ಮಾಡಿಯೇ ಈ ರೀತಿ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದಿದ್ದರು. ಅತುಲ್‌ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿ ಇದೆ. ಇನ್ನೊಂದು ಕಡೆ ಅತುಲ್ ಅವರ ಪತ್ನಿ ಕುಟುಂಬದವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

- Advertisement -

Related news

error: Content is protected !!