Sunday, June 21, 2026
spot_imgspot_img
spot_imgspot_img

ಫೆಬ್ರವರಿ – ಮಾರ್ಚ್ ನಲ್ಲಿ ಸಿಬಿಎಸ್ಇ 10,12ನೇ ತರಗತಿ ಪರೀಕ್ಷೆ

- Advertisement -
- Advertisement -

ನವದೆಹಲಿ: ಸಿಬಿಎಸ್‌ಇ ಮಂಡಳಿ ಕೂಡ ಆಫ್​ಲೈನ್ ಪರೀಕ್ಷೆಗಳ ಬಗ್ಗೆ ಸ್ಪಷ್ಟಪಡಿಸಿದ್ದು. ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳು ಪ್ರತಿ ವರ್ಷದಂತೆ ಫೆಬ್ರವರಿ- ಮಾರ್ಚ್​ನಲ್ಲಿ ನಡೆಯಲಿವೆ. 2021ರ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳ ಬಗ್ಗೆ ಪ್ರಸ್ತುತ ಊಹಾಪೋಹಗಳ ಹಿನ್ನೆಲೆಯಲ್ಲಿ ಮಂಡಳಿ ಈ ಸ್ಪಷ್ಟೀಕರಣ ನೀಡಿದೆ.

ಸಿಬಿಎಸ್​ಇ ಮಂಡಳಿಯು 2021ರ ಪರೀಕ್ಷೆಯನ್ನು ವಿಳಂಬಗೊಳಿಸುವ ಸಂಬಂಧ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸಿಬಿಎಸ್‌ಇಯ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳು ಕೋವಿಡ್-19 ನಿಂದಾಗಿ ಒಂದು ಪರೀಕ್ಷೆಯಿಂದ ಇನ್ನೊಂದು ಪರೀಕ್ಷೆಗೆ ಹೆಚ್ಚು ಅಂತರ ಇರುವ ಸಾಧ್ಯತೆ ಇದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ಮಧ್ಯೆ ಸಿಬಿಎಸ್‌ಇ ಕಂಪಾರ್ಟ್‌ಮೆಂಟ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2021 ರಲ್ಲಿ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಿರ್ವಹಿಸುತ್ತೇವೆ. ಪರೀಕ್ಷೆಗಳನ್ನು ವಿಳಂಬಗೊಳಿಸುವ ಯಾವುದೇ ಯೋಚನೆಗಳಿಲ್ಲ. ಶೀಘ್ರದಲ್ಲೇ ಪರೀಕ್ಷೆಯ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದರು.

- Advertisement -

Related news

error: Content is protected !!