Sunday, May 19, 2024
spot_imgspot_img
spot_imgspot_img

‘ಸೆರಾವೀಕ್‌ ನಾಯಕತ್ವ’ ಪ್ರಶಸ್ತಿಗೆ ಪ್ರಧಾನಿ ಮೋದಿ ಆಯ್ಕೆ

- Advertisement -G L Acharya panikkar
- Advertisement -

ವಾಷಿಂಗ್ಟನ್‌: ಸೆರಾವೀಕ್‌ ಗ್ಲೋಬಲ್‌ ಎನರ್ಜಿ ಆಂಡ್‌ ಎನ್ವಿರಾನ್‌ಮೆಂಟ್‌ ಲೀಡರ್‌ಷಿಪ್‌ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಲಾಗಿದೆ.

ಆನ್‌ಲೈನ್‌ ಮೂಲಕ ಮಾರ್ಚ್‌ 1 ರಿಂದ 5 ರವರೆಗೆ ಸೆರಾವೀಕ್‌ ಕಾನ್ಫರೆನ್ಸ್‌-2021 ನಡೆಯಲಿದ್ದು, ಆ ವೇಳೆ ಮೋದಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟನಾ ಸಂಸ್ಥೆ ಐಎಚ್‌ಎಸ್‌ ಮರ್ಕಿಟ್‌ ತಿಳಿಸಿದೆ.

ಪರಿಸರ ಹಾಗೂ ಇಂಧನ ಸಂರಕ್ಷಣೆಗೆ ಪ್ರಧಾನಿ ಮೋದಿಯವರು ಮಹತ್ವದ ಕೊಡುಗೆ ನೀಡಿದ್ದು, ಈ ಕ್ಷೇತ್ರದ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸುವರು ಎಂಬ ವಿಶ್ವಾಸ ಇದೆ, ಅವರು ಹೊಂದಿರುವ ಬದ್ಧತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ವೈಸ್‌ ಚೇರ್ಮನ್‌ ಡೇನಿಯಲ್‌ ಯೆರ್ಗಿನ್‌ ತಿಳಿಸಿದ್ದಾರೆ.

- Advertisement -

Related news

error: Content is protected !!