Thursday, April 25, 2024
spot_imgspot_img
spot_imgspot_img

ಸಿಇಟಿ 2020 : ಅತ್ಯುತ್ತಮ ಸಾಧನೆ ಮಾಡಿದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

- Advertisement -G L Acharya panikkar
- Advertisement -

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2020 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಗೌರೀಶ್ ಕಜಂಪಾಡಿ ಇವರು ಇಂಜಿನಿಯರಿಂಗ್‌ನಲ್ಲಿ 9 ನೇ ರ್‍ಯಾಂಕ್ & ಫಾರ್ಮಾದಲ್ಲಿ 10 ನೇ ರ್‍ಯಾಂಕ್ ಗಳಿಸಿದ್ದಾರೆ.
ಇವರು ಬಾಲರಾಜ ಕಜಂಪಾಡಿ ಹಾಗೂ ಶ್ರೀಮತಿ ರಾಜನಂದಿನಿ ಇವರ ಪುತ್ರ.

ಗೌರೀಶ್ ಕಜಂಪಾಡಿ

ಪುತ್ತೂರಿನ ದಿನೇಶ್ ಪಾಂಗಾಳ್ ಹಾಗೂ ಸಂಧ್ಯಾ ಪಾಂಗಾಳ್ ಇವರ ಪುತ್ರನಾದ ಅಕ್ಷಯ್ ಪಾಂಗಾಳ್ ಇವರು ಇಂಜಿನಿಯರಿಂಗ್ BNYS 63,ಇಂಜಿನಿಯರಿಂಗ್ ನಲ್ಲಿ 364
Agri Bsc ಯಲ್ಲಿ 39,ವೆಟರ್ನರಿಯಲ್ಲಿ 127 ಹಾಗೂ ಫಾರ್ಮಾದಲ್ಲಿ 217 ನೇ ರ್‍ಯಾಂಕ್ ಪಡೆದಿದ್ದಾರೆ.

ಅಕ್ಷಯ್ ಪಾಂಗಾಳ್

ಸುಳ್ಯದ
ಸೂರ್ಯ ರೈ ಹಾಗೂ ಮೋಹಿನಿ ರೈ ಇವರ ಪುತ್ರಿ ಕು.ನಿಶಾ ಎಮ್ ಎಸ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1226 ನೇ ರ್‍ಯಾಂಕ್ ಲಭಿಸಿದೆ.

ಕು.ನಿಶಾ ಎಮ್ ಎಸ್

ಡಾಕ್ಟರ್ ಸುಬ್ರಹ್ಮಣ್ಯ ಕೆ ಹಾಗೂ ಶ್ರೀಮತಿ ರೇವತಿ ಎಮ್ ಬಿ ದಂಪತಿಗಳ ಪುತ್ರಿಯಾದ ಪುತ್ತೂರಿನ ಶಮಾ ಕೆ ಇವರಿಗೆ BNYS ನಲ್ಲಿ 1220 ಹಾಗೂ Agri Bsc ಯಲ್ಲಿ
1033 ನೇ ರ‌್ಯಾಂಕ್ ಲಭಿಸಿದೆ.

ಶಮಾ ಕೆ

ವೀರಕಂಬದ ನಾರಾಯಣ ಭಟ್ ರಜನಿ ಭಟ್ ದಂಪತಿಗಳ ಪುತ್ರನಾದ ಬಿ ಈಶ್ವರ ಪ್ರಸನ್ನ ಇವರಿಗೆ BNYS ನಲ್ಲಿ 1454 & Agri. Bsc ಯಲ್ಲಿ 895 ನೇ ರ್‍ಯಾಂಕ್ ಲಭಿಸಿದೆ.

ಬಿ ಈಶ್ವರ ಪ್ರಸನ್ನ

ಬೆಟ್ಟಂಪಾಡಿ ಮಿತ್ತಡ್ಕದ ಸೀತಾರಾಮ ಗೌಡ ಹಾಗೂ ಸುಂದರಿ ಇವರ ಪುತ್ರನಾದ ಸಾಕ್ಷಾತ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1356 ನೇ ರ್‍ಯಾಂಕ್ ಲಭಿಸಿದೆ.

ಸಾಕ್ಷಾತ್

ಕೆದಿಲದ ರಾಮಚಂದ್ರ ರಾವ್ ಹಾಗೂ ಗೀತಾ ರಾವ್ ಇವರ ಪುತ್ರನಾದ ವಿಜಿತ್ ಕೃಷ್ಣ ಐತಾಳ್ ಇವರಿಗೆ BNYS ನಲ್ಲಿ 1082 ನೇ ರ್‍ಯಾಂಕ್ ಲಭಿಸಿದೆ.

ವಿಜಿತ್ ಕೃಷ್ಣ ಐತಾಳ್

ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಪುತ್ತೂರಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!