Monday, May 6, 2024
spot_imgspot_img
spot_imgspot_img

ಕೊನೆಗೂ ಸಿಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡ ಚೈತ್ರಾ ಕುಂದಾಪುರ..!!

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಚೈತ್ರಾ ಅಂಡ್‌ ಗ್ಯಾಂಗ್‌ನ ವಂಚನೆ ಪ್ರಕರಣ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಸಿಸಿಬಿ ಅಧಿಕಾರಿ ಬಂಧನ ಮಾಡಿದ್ದಲ್ಲಿಂದ ಇಲ್ಲಿಯವರೆಗೂ ಡ್ರಾಮಾ ಮಾಡುತ್ತಿದ್ದ ಚೈತ್ರಾ ಕುಂದಾಪುರ ಕೊನೆಗೂ ಸಿಸಿಬಿ ಅಧಿಕಾರಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸತ್ಯ ಬಾಯ್ಬಿಟ್ಟಿದ್ದಾಳೆ.

ಬಂಧನ ಆದಾಗ ಚಿನ್ನದ ಉಂಗುರ ನುಂಗಿ ಆತ್ಮಹತ್ಯೆ ನಾಟಕವಾಡಿದ್ದರು. ಸ್ವಾಮೀಜಿ ಸಿಗಲಿ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತೆ ಅಂತೇಳಿ ಎಲ್ಲಾರಿಗೂ ಶಾಕ್‌ ನೀಡಿ, ನಂತರ ಊಟ ಬಿಟ್ಟು ಅಸ್ವಸ್ಥಳಾಗಿ ಆಸ್ಪತ್ರೆ ಸೇರಿ ದೊಡ್ಡ ಡ್ರಾಮಾನೇ ಸೃಷ್ಟಿಸಿದ್ದರು.

ಹಾಲಶ್ರೀ ಸ್ವಾಮೀಜಿ ಎಸ್ಕೇಪ್ ಆಗಿದ್ದಾರೆ. ಅವರು ಸಿಗಲ್ಲ ಅಂತಾ ಚೈತ್ರಾ ಅಂತಾ ಭಂಡ ಧೈರ್ಯದಿಂದ ಸ್ವಾಮೀಜಿ ಮೇಲೆ ಆರೋಪವೆಲ್ಲಾ ಹೊರಿಸಿದ್ದರು. ಯಾವಾಗ ಹಾಲಶ್ರೀ ಒಡಿಶಾ ಕಟಕ್‌ನಲ್ಲಿ ಬಂಧನಕ್ಕೊಳಗಾದರೋ ಇತ್ತ ಚೈತ್ರಾ ನಡುಗಿ ಹೋಗಿದ್ದರು. ಇದೀಗ ಹಾಲಶ್ರೀ ಮುಂದೆ ಚೈತ್ರಾರನ್ನ ಕೂರಿಸಿಯೇ ಪೊಲೀಸರು ವಿಚಾರಣೆ ನಡೆಸಿದ್ದು ನಿಜ ಬಾಯಿ ಬಿಡುವಂತೆ ಮಾಡಿಸಿದ್ದಾರೆ. ಶ್ರೀಕಾಂತ್ ಪೂಜಾರಿ ಜೊತೆ ಸೇರಿ ವಂಚನೆಗೆ ಪ್ಲಾನ್ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೋಪ್ಪಿಕೊಂಡಿದ್ದಾರೆ. ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿದಾಗ, ನಿರಾಕರಿಸುವುದಕ್ಕೆ ಆಗದೇ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ಇಟ್ಟ ದಾಖಲೆ ಕಂಡು ಎಲ್ಲವನ್ನೂ ಬಾಯಿಟ್ಟ ಚೈತ್ರಾ, ತಾನು ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ತಪೊಪ್ಪಿಕೊಂಡಿದ್ದಾರೆ. ಪರಿಚಿತರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನಲೆಗೆ ತರುವುದು, ಟಿಕೆಟ್ ವಿಚಾರವಾಗಿ ನಂಬಿಕೆ ಬರುವಂತಹ ಸನ್ನಿವೇಶ ಸೃಷ್ಟಿಸುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಚೈತ್ರಾ ಪ್ಲಾನ್ ಮಾಡಿದ್ದರು.

ಟಿಕೆಟ್ ಸಿಗದೇ ಹೋದರೆ, ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ್ ಜೀಗೆ ಕೊಟ್ಟಿದ್ದಾಗಿ ಹೇಳಿಕೆ ನೀಡಲು ತಂಡ ನಾಟಕ ಹೆಣೆದಿತ್ತು. ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ, ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಮತ್ತು ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ, ನಮಗೇ ಗೊತ್ತೇ ಇಲ್ಲ ಎಂದು ಹೇಳಲು ತಂಡ ಸಂಚು ರೂಪಿಸಿದ್ದನ್ನೂ ಆರೋಪಿಗಳು ಒಪ್ಪಿದ್ದಾರೆ. 5 ಕೋಟಿ ರೂ. ಪೈಕಿ ಸುಮಾರು ಮೂರುವರೆ ಕೋಟಿ ಚೈತ್ರಾ ಕೈಸೇರಿತ್ತು. ಒಂದೂವರೆ ಕೋಟಿ ರೂಪಾಯಿ ಹಾಲಶ್ರೀ ಪಡೆದುಕೊಂಡಿದ್ದರು.

- Advertisement -

Related news

error: Content is protected !!