Tuesday, April 16, 2024
spot_imgspot_img
spot_imgspot_img

ತಾಯಿಯ ಪ್ರಿಯಕರನಿಂದಲೇ ಮಗಳ ಅತ್ಯಾಚಾರ!

- Advertisement -G L Acharya panikkar
- Advertisement -

ಚಂಡೀಗಢ: ಗಂಡನೊಂದಿಗೆ ಮನಸ್ತಾಪ ಉಂಟಾಗಿ ಆತನಿಂದ ದೂರಾಗಿ ಬೇರೊಬ್ಬ ಗಂಡಸಿನೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ ಮಹಿಳೆ ಇದೀಗ ಪೇಚಿಗೆ ಸಿಲುಕಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಮಹಿಳೆಯ ಮಗಳ ಮೇಲೆ ತಾಯಿಯ ಪ್ರಿಯತಮನೇ ಅತ್ಯಾಚಾರವೆಸಗಿರುವುದಾಗಿ ದೂರು ದಾಖಲಾಗಿದೆ.

ಆ ಮಹಿಳೆಗೆ 2000 ಇಸವಿಯಲ್ಲಿ ಮದುವೆಯಾಗಿತ್ತು. ಇದೀಗ 14 ವರ್ಷದ ಮಗಳೂ ಇದ್ದಾಳೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಆಕೆ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕ ಜೀವನ ನಡೆಸುತ್ತಿದ್ದಳು. ಆ ಮಹಿಳೆಗೆ ಇತ್ತೀಚೆಗೆ ಲುಧಿಯಾನಾ ಮೂಲದ ರೈತ ಯುವಕನೊಬ್ಬನ ಪರಿಚಯವಾಗಿದೆ. ಕೇವಲ 27 ವರ್ಷದವನಾಗಿರುವ ಆತನ ಮೇಲೆ ಮಹಿಳೆಗೆ ಪ್ರೀತಿ ಹುಟ್ಟಿದೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲಿವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾರೆ.

ಆದರೆ ಇತ್ತೀಚೆಗೆ ಒಂದು ದಿನ ಆ ಯುವಕ ತನ್ನ ನಿಜಬಣ್ಣ ತೋರಿಸಿದ್ದಾನೆ. ಮಹಿಳೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಮಹಿಳೆಗೆ ಈ ವಿಚಾರ ತಿಳಿದುಬಂದಿದ್ದು ಆತನೊಂದಿಗೆ ಜಗಳ ಆರಂಭಿಸಿದ್ದಾಳೆ. ಆಗ ಮಹಿಳೆಗೆ ಮನಸೋ ಇಚ್ಛೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವಿಚಾರವಾಗಿ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಇದೀಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

- Advertisement -

Related news

error: Content is protected !!