Wednesday, July 1, 2026
spot_imgspot_img
spot_imgspot_img

‘ಮುದ್ರಾ ಯೋಜನೆ’ ಹೆಸರಲ್ಲಿ ಸಾಲ ಕೊಡ್ತೀವಿ ಎಂದು ವ್ಯಕ್ತಿಯೋರ್ವರಿಗೆ ನಂಬಿಸಿ ಲಕ್ಷಾಂತರ ರೂ. ಪಂಗನಾಮ..!

- Advertisement -
- Advertisement -

ಬೆಂಗಳೂರು: ಹಣಕಾಸಿನ ಸಂಕಷ್ಟದಲ್ಲಿದ್ದ ವ್ಯಕ್ತಿಯೋರ್ವರಿಗೆ ಸಾಲ ಕೊಡುವುದಾಗಿ ನಂಬಿಸಿದ ಫೈನಾನ್ಸ್​ ಕಂಪನಿಯೊಂದು ಬರೋಬ್ಬರಿ ಒಂದೂವರೆ ಲಕ್ಷ ಟೋಪಿ ಹಾಕಿರೋ ಘಟನೆ ನಗರದಲ್ಲಿ ವರದಿಯಾಗಿದೆ.

ಏನಿದು ಪ್ರಕರಣ?
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಆಪರೇಷನ್​ಗೆ ಎಂದು ವ್ಯಕ್ತಿಯೊಬ್ಬರು 12 ಲಕ್ಷ ಖರ್ಚು ಮಾಡಿ ಆಪರೇಷನ್​ ಮಾಡಿಸಿದ್ದರು. ಆ ಹನ್ನೆರಡು ಲಕ್ಷ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ‌ ವೇಳೆ ಮುದ್ರಾ ಹೆಸರಿನ ಫೈನಾನ್ಸ್ ಕಂಪನಿಯಿಂದ ಸಾಲ ಕೊಡುವುದಾಗಿ ಕರೆ ಬಂದಿದೆಯಂತೆ.

ಈ ವೇಳೆ ತಾಯಿ ಆಪರೇಷನ್ ಗೆ ಮಾಡಿದ್ದ ಸಾಲ ತೀರಿಸೋಕೆ ಹಣ ಸಿಕ್ಕುತ್ತೆ ಅಂತಾ ನಂಬಿದ್ದ ವ್ಯಕ್ತಿಗೆ ಮಾತ್ರ ಪಂಗನಾಮ ಬಿದ್ದಿದೆ. 8-10ಲಕ್ಷದ ವರೆಗೂ ಸಾಲ ಕೊಡ್ತೀವಿ ಎಂದು ಕರೆ ಮಾಡಿದ್ದ ಖತರ್ನಾಕ್​ ಕಿಲಾಡಿಗಳು ಲಕ್ಷ್ಮೀ ಅನ್ನೋ ಹೆಸರಿನ ಯುವತಿಯಿಂದ ವ್ಯಕ್ತಿಗೆ ಕಾಲ್ ಮಾಡಿಸಿದ್ದರಂತೆ.

ಎಂಟತ್ತು ಲಕ್ಷ ಲೋನ್ ಕೊಡ್ತೀವಿ ಎರಡು ಮೂರು ಸಾವಿರ ಫೀಸ್ ಕಟ್ಟಿದ್ರೆ ಸಾಕು ಅಂತಾ ಪುಂಗಿದ್ದಾರೆ ಬಳಿಕ ಆ ಫೀಸ್, ಈ ಫೀಸ್ ಅಂತಾ ಒಂದೇ ದಿನದಲ್ಲಿ 1.5 ಲಕ್ಷ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ನಂತರ ಕಾಲ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪುಣೆಯಿಂದ ಕಾಲ್ ಮಾಡಿ ವಂಚನೆ ಮಾಡಲಾಗಿದೆ ಎನ್ನಲಾಗಿದ್ದು ಸದ್ಯ ಇರೋ ಒಂದು ಲಕ್ಷ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರೋ ವ್ಯಕ್ತಿ ದಿಕ್ಕು ತೋಚದೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

driving
- Advertisement -

Related news

error: Content is protected !!