Friday, April 26, 2024
spot_imgspot_img
spot_imgspot_img

ಮಲ್ಪೆ ಬಂದರಿನಲ್ಲಿ ಬಾಲಕಾರ್ಮಿಕರ ರಕ್ಷಣೆ !!

- Advertisement -G L Acharya panikkar
- Advertisement -

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮಲ್ಪೆ ಬಂದರಿನಲ್ಲಿ 17 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

ಕೊಪ್ಪಳ, ಬಳ್ಳಾರಿ ಮೂಲದ ಈ ಮಕ್ಕಳು ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದರು. ಈ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, 17 ಮಕ್ಕಳನ್ನೂ ರಕ್ಷಣೆ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್​ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ಮಕ್ಕಳ ರಕ್ಷಣೆಗೆ ಸಹಕಾರ ನೀಡಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಾಲಕ ಬಾಲಕಿಯರನ್ನ ಹಾಜರುಪಡಿಸಲಾಗಿದೆ. ಈ ಕುರಿತು ಉಡುಪಿಯ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!