Saturday, May 11, 2024
spot_imgspot_img
spot_imgspot_img

ಗಡಿಯಲ್ಲಿ ಮತ್ತೆ ಚೀನಾ ಕಿರಿಕ್

- Advertisement -G L Acharya panikkar
- Advertisement -

ಗಾಲ್ವಾನ್ ಘರ್ಷಣೆ ಬಳಿಕವೂ ಚೀನಾ ತನ್ನ ನರಿಬುದ್ಧಿ ಪ್ರದರ್ಶಿಸಿದೆ. ಪೂರ್ವ ಲಡಾಖ್ ನ ಪಾಂಗಾಂಗ್ ತ್ಸೋ ಪ್ರದೇಶದಲ್ಲಿ ಪ್ರಚೋದನಕಾರಿ ಮಿಲಿಟರಿ ಚಟುವಟಿಕೆ ನಡೆಸುವ ಮೂಲಕ ಚೀನಾ ಸೇನೆ ನಿಯಮ ಉಲ್ಲಂಘಿಸಿದೆ. ಇದನ್ನು ನಮ್ಮ ಸೈನಿಕರು ತಡೆದಿದ್ದು, 2 ಕಡೆಯ ಸೈನಿಕರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಭಾರತೀಯ ಸೈನಿಕರು ಚೀನಾದ ಸೈನಿಕರಿಗೆ ಪೆಟ್ಟುಕೊಟ್ಟು ಪಾಠ ಕಲಿಸಿದ್ದಾರೆ. ಆದರೆ ಯಾವುದೇ ರೀತಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಎಂದು ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಿಂದ ತಿಳಿದುಬಂದಿದೆ.

ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಚೀನಾದ ಲಿಬರೇಷನ್ ಸೇನಾ ಪಡೆ, ಉಭಯ ದೇಶಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಒಪ್ಪಂದದ ಸಮಯದಲ್ಲಿ ಮಾಡಿಕೊಳ್ಳಲಾಗಿದ್ದ ಒಮ್ಮತದ ನಿರ್ಣಯವನ್ನು ಉಲ್ಲಂಘಿಸಿದೆ. ಆದರೆ ಇದನ್ನು ತಡೆಯಲು ಭಾರತೀಯ ಸೇನಾಪಡೆ ಸಫಲವಾಗಿದೆ ಎಂದು ತಿಳಿಸಿದೆ.

- Advertisement -

Related news

error: Content is protected !!