Saturday, April 27, 2024
spot_imgspot_img
spot_imgspot_img

18 ಸಾವಿರದಷ್ಟು ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ ಸರ್ಕಾರ!

- Advertisement -G L Acharya panikkar
- Advertisement -

ಚಿತ್ರದುರ್ಗ: ಸುಮಾರು 18 ಸಾವಿರ ಕಾರ್ಡ್ ರದ್ದುಗೊಳಿಸಲಾಗಿದ್ದು, ಸುಮಾರು 15 ಸಾವಿರ ರೈತರ ಕಾರ್ಡ್​ಗಳು ರದ್ದಾಗಿವೆ. ಇದರಿಂದಾಗಿ, ಅನೇಕ ಬಡ ರೈತರು ಬಿಪಿಎಲ್ ಕಾರ್ಡ್ ಸೌಲಭ್ಯ ಕಳೆದುಕೊಂಡು ಕಂಗಾಲಾಗುವಂತಾಗಿದೆ.

ಶ್ರೀಮಂತರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಿ. ಆದರೆ, ರೈತರು, ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ತೊಂದರೆಯುಂಟಾಗಿದೆ. ರೈತಾಪಿ ವರ್ಗದವರು ಸೇರಿದಂತೆ ಬಡವರ ಬಿಪಿಎಲ್ ಕಾರ್ಡ್ ರದ್ದು, ಮಾಡದೇ ಯಥಾಸ್ಥಿತಿ ಮುಂದುವರೆಸಬೇಕೆಂದು ಹೇಳಲಾಗಿದೆ.

ಆಧಾರ್ ಕಾರ್ಡ್ ಆಧರಿಸಿ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ವೇಳೆ ಕೆಲ ತಪ್ಪುಗಳು ಆಗಿದ್ದು, ಬಡ ಜನರಿಗೆ ತೊಂದರೆ ಆಗಿದೆ. ಹೀಗಾಗಿ, ಈ ಬಗ್ಗೆ ಮರುಪರಿಶೀಲಿಸಿ ಬಡಜನರು ಮತ್ತು ರೈತರಿಗೆ ಬಿಪಿಎಲ್ ಕಾರ್ಡ್ ಯಥಾಸ್ಥಿತಿ ಮುಂದುವರೆಸಬೇಕೆಂಬ ಆಗ್ರಹ ಕೇಳಿ ಬಂದಿದೆ.

- Advertisement -

Related news

error: Content is protected !!