Wednesday, July 22, 2026
spot_imgspot_img
spot_imgspot_img

ಚಿತ್ರದುರ್ಗ: ಮದುವೆ ಮಾಡಲಿಲ್ಲವೆಂದು ಹೆತ್ತ ತಂದೆಯನ್ನೇ ಕೊಂದ ಮಗ !

- Advertisement -
- Advertisement -

ಚಿತ್ರದುರ್ಗ: ಮದುವೆ ಮಾಡಲಿಲ್ಲವೆಂದು ಆಕ್ರೋಶಗೊಂಡ ಪುತ್ರನೋರ್ವ ಹೆತ್ತ ತಂದೆಯನ್ನೇ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಣ್ಣನಿಂಗಪ್ಪ ಮೃತ ತಂದೆ. ಚಿಕ್ಕಮಗ ನಿಂಗರಾಜ್, ನನ್ನ ಜೊತೆಗೆ ಬೆಳೆದ ಸ್ನೇಹಿತರೆಲ್ಲರೂ ಮದುವೆಯಾದರು. ಆದರೆ ನೀನು ನನಗೆ ಸಕಾಲಕ್ಕೆ ಮದುವೆ ಮಾಡಲಿಲ್ಲವೆಂದು ತಂದೆಯೊಂದಿಗೆ ದಿನವೂ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ಅಣ್ಣ, ಅಕ್ಕ, ತಾಯಿ, ಕುಟುಂಬಸ್ಥರು ಎಷ್ಟೇ ಬುದ್ಧಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ನಿಂಗರಾಜ್ (36) ಬುಧವಾರ ರಾತ್ರಿ ತಂದೆ ಸಣ್ಣನಿಂಗಪ್ಪ (65) ಮಲಗಿದ್ದ ವೇಳೆ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಈ ವೇಳೆ ಸಣ್ಣನಿಂಗಪ್ಪನ ಕೂಗಾಟ ಕೇಳಿ ಕುಟುಂಬಸ್ಥರು ಎದ್ದಿದ್ದು, ತೀವ್ರ ರಕ್ತ ಸ್ರಾವಗೊಂಡಿದ್ದಂತಹ ಸಣ್ಣನಿಂಗಪ್ಪನನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದರು. ಈ ವೇಳೆ ಪರೀಕ್ಷೆ ನಡೆಸಿದಂತಹ ವೈದ್ಯರು ಸಣ್ಣನಿಂಗಪ್ಪ ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಘಟನೆ ಸಂಬಂಧ ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ್ ತಂದೆ ಸಣ್ಣನಿಂಗಪ್ಪನನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಹೊಸದುರ್ಗ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ.ಟಿ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್ ಕುಮಾರ್.ಎಸ್, ಕ್ರೈಂ ಪಿಸಿ ರಮೇಶ್ ಕೊಲೆ ಆರೋಪಿ ನಿಂಗರಾಜ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ

- Advertisement -

Related news

error: Content is protected !!