- Advertisement -
- Advertisement -
ಮಂಗಳೂರಿನ ಸುರತ್ಕಲ್ ಬಳಿಯಿರುವ ಸಂಸ್ಥೆಯ 7 ಸಿ ಐ ಎಸ್ ಎಫ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸಂಸ್ಥೆಯ ಹೊರ ಭಾಗದಲ್ಲಿ ಭದ್ರತಾ ಕಾರ್ಯವನ್ನು ಮಾಡುವ ಸಿಬ್ಬಂದಿಗಳು ಇವರಾಗಿದ್ದಾರೆ. ಈ ಏಳು ಮಂದಿಯಲ್ಲಿ ಸೋಂಕು ಇರುವುದು ಇದೀಗ ದೃಢಪಟ್ಟಿದೆ.ಇದರ ಜೊತೆಗೆ ಇವರ ಸಂಪರ್ಕಕ್ಕೆ ಬಂದಿರುವ ಅನೇಕ ಮಂದಿಗೆ ಇದೀಗ ಕ್ವಾರಂಟೈನ್ ವಿಧಿಸಲಾಗಿದೆ.
ಅಲ್ಲದೆ, ಪಾಸಿಟಿವ್ ಬಂದಿರುವ ಸಿ ಐ ಎಸ್ ಎಫ್ ಸಿಬ್ಬಂದಿಗಳ ಮನೆಯವರಿಗೂ ಕ್ವಾರಂಟೈನ್ ವಿಧಿಸಲಾಗಿದೆ.ಇನ್ನು ಈ ಸಿಬ್ಬಂದಿಗಳ ಸೋಂಕಿನ ಮೂಲ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.
- Advertisement -