Saturday, June 20, 2026
spot_imgspot_img
spot_imgspot_img

ಮಾಣಿ: ಕೋಡಿ ಫ್ರೆಂಡ್ಸ್ ಆಶ್ರಯದಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ**ದಿ.ದಾಮೋದರ್ ಪೈ ಮಾಣಿ ಇವರ ಸಂಸ್ಮರಣಾ ಕಾರ್ಯಕ್ರಮ- ಸಮಾರೋಪ ಸಮಾರಂಭ*

- Advertisement -
- Advertisement -

ಮಾಣಿ: ಕೋಡಿ ಫ್ರೆಂಡ್ಸ್ ಮಾಣಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನ. 23 ನೇ ಶನಿವಾರ ಮಾಣಿ ಗಾಂಧಿ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಮಾಜಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್‌ ಕುಮಾರ್‌ ಕಟೀಲ್ ಹಾಗೂ ಸಚಿನ್‌ ರೈ ಮಾಣಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರಾಗಿ ಹಾಗೂ ಹಿರಿಯ ಕಬಡ್ಡಿ ಆಟಗಾರರಾಗಿ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ದಿ.ದಾಮೋದರ್ ಪೈ ಮಾಣಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯರು ಕಿಶೋರ್‌ ಕುಮಾರ್‌ ಬೊಟ್ಯಾಡಿ, ಮಾಣಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಸುದೀಪ್‌ ಕುಮಾರ್‌ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು ಬಾಲಕೃಷ್ಣ ಆಳ್ವ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ನಾರಾಯಣ ಶೆಟ್ಟಿ ತೋಟ, ಗಣಪತಿ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರು, ರಾಷ್ಟ್ರೀಯ ಮಟ್ಟದ ಹಿರಿಯ ಕಬಡ್ಡಿ ಆಟಗಾರರು ಶಶಿಧರ್‍ ಸೇರ, ಗಣೇಶ್‌ ಪೂಜಾರಿ ಕೊಡಾಜೆ, ಮಾಲಕರು ಸಾಯಿ ಇಂಜಿನಿಯರಿಂಗ್‌ ವರ್ಕ್ಸ್‌ ಕೊಡಾಜೆ, ಯಶೋಧರ ಪೂಜಾರಿ ಗ್ರಾಮ ದೈವದ ಪಾತ್ರಿ, ನಾರಾಯಣ ಆಳ್ವ ಮಂಡ್ಯ, ಉದ್ಯಮಿ, ರಾಮ್‌ದಾಸ್‌ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಕೋಡಿ ಫ್ರೆಂಡ್ಸ್‌ ಅಧ್ಯಕ್ಷರು ನವೀನ್‌ ಮಾಣಿ, ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಣಿ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಹಾಗೂ ನಿವೃತ್ತ ಹಿರಿಯ ಸೈನಿಕರು ಉದಯ್‌ಶಂಕರ್‌ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೋಡಿ ಫ್ರೆಂಡ್ಸ್‌ನ ಎಲ್ಲಾ ಕಾರ್ಯಕರ್ತರು ಊರ ಪರವೂರ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಬಡ್ಡಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶ್ರೀ ಶಾರದಾ ಯುವ ವೇದಿಕೆಯ ಅಧ್ಯಕ್ಷರು ಭರತ್‌ ಶೆಟ್ಟಿ ಮಾಣಿ, ಮಾಣಿ ಗ್ರಾಮದ ದೈವ ಪಾತ್ರಿ ಯಶೋಧರ ಪೂಜಾರಿ ಕೊಡಾಜೆ, ಕೋಡಿ ಫ್ರೆಂಡ್ಸ್‌ನ ಸ್ಥಾಪಕ ಅಧ್ಯಕ್ಷರು ರಾಜೇಶ್‌ ಕೊಪ್ಪಳ, ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷರು ಸುರೇಶ್‌ ಕುಲಾಲ್‌ ಮಾಣಿ, ಕೋಡಿ ಫ್ರೆಂಡ್ಸ್‌ ಅಧ್ಯಕ್ಷರು ನವೀನ್‌ ಮಾಣಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ವಿನ್ನರ್‍ಸ್‌ ಆಗಿ ಮಿಂಚಿದ ಪಟ್ಲ ಫ್ರೆಂಡ್ಸ್ ಮಾಣಿ ತಂಡ, ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್ ಆಗಿ ಹೊರಹೊಮ್ಮಿದ ಪಟ್ಲ ಫ್ರೆಂಡ್ಸ್ ಮಾಣಿ ತಂಡ, ತೃತೀಯ ಸ್ಥಾನಿಯಾಗಿ ಮಿಂಚಿದ ಸ್ಟಾರ್ ಗೈಸ್ ಕುಪ್ಪೆಟ್ಟಿ, ಚತುರ್ಥ ಸ್ಥಾನ ಪಡೆದ ಎನ್‌ವೈಸಿ ಬಾಡೂರು ತಂಡಗಳಿಗೆ ಬಹುಮಾನ ವಿತರಿಸಲಾಯಿತು.

- Advertisement -

Related news

error: Content is protected !!