
ಸರಿಸುಮಾರು ಐನೂರು ವರ್ಷಗಳ ಹಿಂದೆ ಮುಘಲ್ ದಾಳಿಕೋರ ದೊರೆಗಳು ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿದ್ದ ಮಂದಿರವನ್ನು ಕೆಡವಿ ತಮ್ಮ ಪ್ರಾರ್ಥನಾ ಸ್ಥಳಗಳನ್ನು ಕಟ್ಟಿಕೊಂಡರು ಎಂದು ಇತಿಹಾಸ ಹೇಳುತ್ತದೆ. ಅಲ್ಲಿಂದೀಚೆಗೆ ನಡೆದ ದೀರ್ಘ ಹೋರಾಟ ಕೊನೆಗೂ ಅಂತಿಮ ಬಿಂದುವನ್ನು ತಲುಪಿದೆ. ‘ಅದು ನಿರ್ವಿವಾದವಾಗಿ ಪ್ರಭು ಶ್ರೀರಾಮನ ಜನ್ಮಸ್ಥಳವೇ ಹೌದು. ಅಲ್ಲಿ ರಾಮಚಂದ್ರನ ಭವ್ಯ ದಿವ್ಯ ಮಂದಿರವನ್ನು ಕಟ್ಟುವುದೇ ನ್ಯಾಯವಾದದ್ದು’ ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ತೀರ್ಪು ಕೊಟ್ಟು ಸುದೀರ್ಘ ವಿವಾದಕ್ಕೆ ಮಂಗಳ ಹಾಡಿದೆ.
ಅಯೋಧ್ಯೆಯಲ್ಲಿ ಕಟ್ಟುತ್ತಿರುವ ಮಂದಿರ ಕೇವಲ ಪ್ರಭು ರಾಮಚಂದ್ರನ ಮಂದಿರವಷ್ಟೇ ಅಲ್ಲ, ಅದು ದೇಶದ ಅಸ್ಮಿತೆಯ ಪ್ರತೀಕ. ದೇಶದ ಉದ್ದಗಲದ ಪ್ರತಿಯೊಬ್ಬರಲ್ಲೂ ರಾಷ್ಟ್ರ ಜಾಗೃತಿಯೊಂದು ಮೂಡಿದ್ದರ ದ್ಯೋತಕ. ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿರುವ ಈ ಹೊತ್ತಿನಲ್ಲಿ, ಹೋರಾಟ ರೂಪುಗೊಂಡ ಬಗೆ, ವಿವಾದ ಪರಿಹಾರವಾದ ರೀತಿ, ಪುರಾತತ್ವ ದಾಖಲೆಗಳ ವಿವರಗಳು, ದೇಶದ ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಜಾಗೃತವಾದ ಬಗೆ.. ಇವೆಲ್ಲವನ್ನೂ ಮೆಲುಕು ಹಾಕುವ ಒಂದು ವಿಶೇಷ ಕಾರ್ಯಕ್ರಮ ದಿನಾಂಕ 6 ಸೆಪ್ಟೆಂಬರ್ 2021 (ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರ ಹೀಗಿದೆ:
ಶೀರ್ಷಿಕೆ: ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’
ದಿವ್ಯ ಉಪಸ್ಥಿತಿ ಮತ್ತು ಮುಖ್ಯ ಉಪನ್ಯಾಸ: ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು
(ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಹಾಗೂ ವಿಶ್ವಸ್ಥರು, ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್, ಅಯೋಧ್ಯಾ)
ದಿವ್ಯ ಉಪಸ್ಥಿತಿ: ಶ್ರೀ ಶ್ರೀ ರಾಜಶೇಖರಾನಂದ ಶ್ರೀಪಾದಂಗಳವರು
(ಗುರುಪುರ ಶ್ರೀ ವಿದ್ಯಾಮಾನ್ಯ ತೀರ್ಥ ಸಂಸ್ಥಾನಮ್, ವಜ್ರದೇಹಿ ಮಠ)
ವಿಶೇಷ ಆಮಂತ್ರಿತರು: ಪದ್ಮಶ್ರೀ ಪುರಸ್ಕೃತ ಡಾ. ಕೆ. ಕೆ. ಮುಹಮದ್
(ನಿವೃತ್ತ ಅಧಿಕಾರಿಗಳು, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ, ಭಾರತ ಸರಕಾರ)
ವಿಶೇಷ ಆಮಂತ್ರಿತರು: ಶ್ರೀ ಎನ್. ರವಿಕುಮಾರ್
(ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ)
ಕಾರ್ಯಕ್ರಮವನ್ನು ಅಂಕಣಕಾರರಾದ ಶ್ರೀ ರೋಹಿತ್ ಚಕ್ರತೀರ್ಥ ಅವರು ನಡೆಸಿಕೊಡಲಿದ್ದಾರೆ. ಖ್ಯಾತ ಗಾಯಕಿ ಹಾಗೂ ಆಕಾಶವಾಣಿ ಕಲಾವಿದೆ ಕುಮಾರಿ ರಮ್ಯಾ ವಾಸಿಷ್ಠ ಅವರು ಪ್ರಾರ್ಥನೆ ಹಾಡಲಿದ್ದಾರೆ. ಸಮಾಜದ ಹತ್ತು ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












