Friday, June 5, 2026
spot_imgspot_img
spot_imgspot_img

ಅಪಘಾತಕ್ಕೀಡಾದ ಸಿಎನ್‌ಜಿ ಆಟೋ ರಿಕ್ಷಾದಲ್ಲಿ ಬೆಂಕಿ; ಇಬ್ಬರು ಸಜೀವ ದಹನ

- Advertisement -
- Advertisement -

ಸಿಎನ್ ಜಿ ಚಾಲಿತ ಆಟೋ ರಿಕ್ಷಾವೊಂದು ಅಪಘಾತಕ್ಕೀಡಾದ ಬಳಿಕ ಬೆಂಕಿ ಹೊತ್ತಿಕೊಂಡು ಆಟೋದಲ್ಲಿದ್ದ ಇಬ್ಬರು ಸಜೀವವಾಗಿ ದಹನವಾದ ಘಟನೆ ಕಣ್ಣೂರಿನ ಕತಿರೂರಿನಲ್ಲಿ ನಡೆದಿದೆ.

ಅಪಘಾತದಲ್ಲಿ ಚಾಲಕ ಅಭಿಲಾಷ್ (37) ಮತ್ತು ಆತನ ಸ್ನೇಹಿತ ಸಜೀಶ್ (36) ಸುಟ್ಟು ಕರಕಲಾಗಿದ್ದಾರೆ. ಆಟೋರಿಕ್ಷಾ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಟೋ ಪಲ್ಟಿಯಾಗಿದ್ದು, ಈ ವೇಳೆ ಸಿಎನ್ ಜಿ ಸಿಲಿಂಡರ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿಯ ಕೆನ್ನಾಲಗೆಗೆ ಸ್ಥಳೀಯರಿಗೂ ಆಟೋ ರಿಕ್ಷಾದ ಹತ್ತಿರಕ್ಕೂ ಹೋಗಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಪೊಲೀಸರು ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರಿಬ್ಬರ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅವರನ್ನು ಗುರುತಿಸಲು ಸಾಕಷ್ಟು ಸಮಯ ಹಿಡಿಯಿತು. ಪೊಲೀಸರು ಆಟೋದಲ್ಲಿದ್ದ ಲೈಸೆನ್ಸ್ ಪ್ಲೇಟ್ ಬಳಸಿ ಅದು ಅಭಿಲಾಷ್ ಅವರದ್ದೇ ಎಂದು ನಿರ್ಧರಿಸಿದ್ದಾರೆ.

ಮತ್ತೊಂದೆಡೆ, ಸಜೀಶ್ ತನ್ನ ಸಹೋದರಿಯ ಮನೆಗೆ ಭೇಟಿ ನೀಡಲು ಆಗಾಗ್ಗೆ ಅಭಿಲಾಷ್ ಆಟೋದಲ್ಲಿ ಬಂದಿದ್ದ ಎಂದು ತಿಳಿದು ಬಂದಿದೆ. ದುರಂತವೆಂದರೆ, ಸಹೋದರಿಯ ಮನೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಅಭಿಲಾಷ್ ಆರು ತಿಂಗಳ ಹಿಂದೆಯಷ್ಟೇ ಆಟೋ ಖರೀದಿಸಿದ್ದರು.

- Advertisement -

Related news

error: Content is protected !!