

ಪುತ್ತೂರು ಆರ್ ಎಸ್ ಎಸ್ ಬಗ್ಗೆ ಪ್ರಚೋದನಕಾರಿ ಮತ್ತು ಧಾರ್ಮಿಕ ನಂಬಿಕೆ ಧಕ್ಕೆ ಯಾಗುವಂತಹ ಆಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಪುತ್ತೂರಿನ ಮರೀಲ್ ನಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿರುವ ಅಖಿಲ್ ಎಂಬವನ ಜೊತೆ ಸಾಮಾಜಿಕ ಕಾರ್ಯಕರ್ತ ಎನ್ನಲಾದ ಹಕೀಂ ಕೂರ್ನಡ್ಕ ಎಂಬವನು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಆಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಹಕೀಂ ಕೂರ್ನಡ್ಕ ವಿರುದ್ಧ ಎಡಕ್ಕಾನ ಕಲ್ಮಡ್ಕ ನಿವಾಸಿ ರಾಜಾರಾಮ್ ಭಟ್ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಆಡಿಯೋ ಸಂಭಾಷಣೆಯಲ್ಲಿ ಉತ್ತರ ಭಾರತದ ಕಸಾಯಿಖಾನೆ ನಡೆಸುವವರು ಆರ್ ಎಸ್ ಎಸ್ ಮತ್ತು ಬಿಜೆಪಿ, 40% ಹಿಂದೂಗಳು ಗೋ ಮಾಂಸ ಭಕ್ಷಕರು, ಗೋಮಾಂಸ ರಫ್ತನಲ್ಲಿ ಭಾರತ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಪ್ರಚೋದನಕಾರಿ ಮಾತುಗಳನ್ನಾಡಿ ಧಾರ್ಮಿಕ ಭಾವನೆ ನಂಬಿಕೆಗಳಿಗೆ ಧಕ್ಕೆ ಬರುವಂತೆ ಪ್ರಯತ್ನಿಸಿ ಕೋಮು ಪ್ರಚೋದನೆ ಪ್ರೋತ್ಸಾಹ ನೀಡಿದ್ದಾನೆ. ಅಲ್ಲದೇ ಭಾರತೀಯ ಜನಹಿತ ಪರಿವಾರ ಗ್ರೂಪ್ ನಲ್ಲಿಯೂ ಬಂದಿದೆ.
ಸನಾತನ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಹಕೀಂ ಕೂರ್ನಡ್ಕ ಪತ್ತೆ ಹಚ್ಚಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.








