- Advertisement -
- Advertisement -




ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯಭೇರಿ ಬಾರಿಸಿದ್ದಾರೆ.
ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಜಯಭೇರಿ ಬಾರಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಸಹಿತ ಎರಡೂ ಪಕ್ಷಗಳಲ್ಲಿ ಗೆಲುವಿನ ವಿಶ್ವಾಸ ಜೋರಾಗಿಯೇ ಇತ್ತು, ಕೊನೆಗೂ ಅದೃಷ್ಟ ಉಮೇಶ್ ಮೇಟಿ ಅವರಿಗೆ ಒಲಿದಿದೆ. ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಪ್ರಚಾರವನ್ನೂ ಚರಂತಿಮಠ ಅವರ ಪರವಾಗಿ ಮಾಡಿದ್ದರು. ಆದರೂ ಮತ್ತೊಂದು ಸೋಲು ಅನುಭವಿಸಬೇಕಾಯಿತು.
ಮಾಜಿ ಸಚಿವ ಎಚ್.ವೈ.ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಎ.9ರಂದು ಉಪಚುನಾವಣೆ ನಡೆದಿತ್ತು ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








