- Advertisement -
- Advertisement -
ಬಂಟ್ವಾಳ: ಕಲ್ಲಡ್ಕ ಪೇಟೆ ನಿವಾಸಿ ಉದ್ಯಮಿಯಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರು ಸಾಮಾಜಿಕ ಕಾರ್ಯಕರ್ತರಾಗಿದ್ದು ಮಾಜಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನೇಶ್ ಶೆಣೈ ಕಲ್ಲಡ್ಕರವರು ಇಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕೆಲ ದಿನಗಳ ಹಿಂದೆ ಜ್ವರದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ ರಾತ್ರಿ ಕೆಮ್ಮು ಜಾಸ್ತಿಯಾಗಿ ಅವರನ್ನು ತುರ್ತು ನಿಗಾ ಘಟಕ ಕ್ಕೆ ರವಾನಿಸುವ ವೇಳೆ ಅವರು ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.ಮಾಜಿ ಸಚಿವರಾದ ರಮಾನಾಥ್ ರೈ,ಮಾಜಿ ಸಚಿವರೂ ಮಂಗಳೂರು ಶಾಸಕರಾದ ಯು ಟಿ ಖಾದರ್ ಸಹಿತ ಹಲವು ಮುಖಂಡರು ದಿನೇಶ್ ಶೆಣೈ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
- Advertisement -