Monday, July 27, 2026
spot_imgspot_img
spot_imgspot_img

ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಯಕ್ಷಗಾನ ಕಲಾವಿದರು-ಮೇಳದ ಭಾಗವತರಿಂದ ತರಕಾರಿ ಮಾರಾಟ

- Advertisement -
- Advertisement -

ಉಡುಪಿ (ಅ. 19): ಕೊರೋನಾ ಎಂಬ ಮಹಾಮಾರಿಯಿಂದಾಗಿ ಕರಾವಳಿಯ ಗಂಡುಕಲೆ ಎಂದೇ ಕರೆಯಲ್ಪಡುವ‌‌ ಯಕ್ಷಗಾನಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಯಕ್ಷಗಾನವನ್ನೇ ನಂಬಿ ಬದುಕುವ ಕಲಾವಿದರು ಅತಂತ್ರರಾಗಿದ್ದಾರೆ.‌ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಭಾಗವತರೊಬ್ಬರು ಬದುಕು ಕಟ್ಟಿಕೊಳ್ಳಲು ತರಕಾರಿ ಮಾರುವಂತ ಸ್ಥಿತಿ ಎದುರಾಗಿದೆ.

ಕೊರೋನಾ ಎಂಬ ಮಹಾಮಾರಿ ಅದೆಷ್ಟರ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆಯಂದರೆ ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದ ಸಹಸ್ರ ಕಲಾವಿದರು ಬೀದಿಗೆ ಬಿದ್ದಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದ ನಾಲ್ಕು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ,  ದಕ್ಷಿಣಕನ್ನಡ,  ಶಿವಮೊಗ್ಗ ಭಾಗದಲ್ಲಿ ಸುಮಾರು 50 ಮೇಳ‌ಗಳಲ್ಲಿ 2 ಸಾವಿರಕ್ಕೂ ಅಧಿಕ ಕಲಾವಿದರು ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದಾರೆ.‌ ಅದೆಷ್ಟೋ ಕಲಾವಿದರು ವರ್ಷವಿಡೀ ಮೇಳಗಳಲ್ಲಿ  ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ 2020 ಈ ವರ್ಷ ವಕ್ಕರಿಸಿದ ಕೊರೋನಾ ಎಂಬ ಸುನಾಮಿ ಯಕ್ಷಗಾನ ಕಲಾವಿದರ ಬದುಕನ್ನೇ ಛಿದ್ರಗೊಳಿಸಿದೆ.‌

ಭಾಗವನ್ನೇ ಮಾಡಿಕೊಂಡಿದ್ದರು. ‌25 ವರ್ಷ ಹವ್ಯಾಸಿ‌ ಕಲಾವಿದರಾಗಿ‌ ಇನ್ನುಳಿದ‌ 9 ವರ್ಷ ಪೂರ್ಣಕಾಲಿಕ ಭಾಗವತರಾಗಿ ಶನೀಶ್ಚರ ಮೇಳ, ಕಮಲಶಿಲೆ, ಹಟ್ಟಿಯಂಗಡಿ, ಬಪ್ಪನಾಡು ಮೇಳದಲ್ಲಿ ಯಕ್ಷಗಾನಕ್ಕೆ‌ ಜೀವ ತುಂಬಿದ್ದರು. ಆದರೆ ಈ ಕಲಾವಿದರ ಜೀವನ ಅತಂತ್ರವಾಗಿ ಇದೀಗ ತರಕಾರಿ‌‌ ಮಾರುವಂತಾಗಿದೆ.ಹೌದು, ತಮ್ಮ‌ ಸುದೀರ್ಘ ಜೀವನದಲ್ಲಿ ಕಲೆ ಇವರನ್ನು ಯಾವತ್ತೂ ಕೈ ಬಿಟ್ಟಿರಲಿಲ್ಲ. ತಮ್ಮ‌ ಜೀವನದ ದೊಡ್ಡ ಸಾಲವನ್ನು ಇವರು ಯಕ್ಷಗಾನದಲ್ಲಿ ಬಂದ ಆದಾಯದಿಂದಲೇ ತೀರಿಸಿದ್ದರು.

ಈ ಖುಷಿಯಲ್ಲೇ ಮನೆ ಕೂಡ ಕಟ್ಟಲು ಮುಂದಾದರು. ಅಷ್ಟರಲ್ಲಿ ಕೊರೋನಾ ಮಹಾಮಾರಿ ಭಾಗವತ ಗಣೇಶ್ ಅವರ ಜೀವನದ ದಿಕ್ಕನ್ನೇ ತಪ್ಪಿಸಿದೆ. ಎಲ್ಲೂ ಯಕ್ಷಗಾನ ಆಟಗಳಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.‌ ಒಂದು ಕಡೆ ಸಾಲದ ಸುಳಿಯಲ್ಲಿದ್ದ ಇವರು ತಮ್ಮ ಕಾರನ್ನೂ‌ ಮಾರಿದ್ರು ಮುಂದೇನು ಅನ್ನುವಷ್ಟದಲ್ಲಿ ಸ್ನೇಹಿತರ ಸಲಹೆಯಂತೆ ತರಕಾರಿ ಅಂಗಡಿ ತೆರೆದೇ ಬಿಟ್ಟರು. ಆದರೂ ಇವರ ಜೀವನ ಆಮೆಗತಿಯಲ್ಲಿ ಸಾಗುತ್ತಿದೆ.

- Advertisement -

Related news

error: Content is protected !!