Wednesday, May 8, 2024
spot_imgspot_img
spot_imgspot_img

ಕೊರೊನಾ ಎರಡನೇ ಅಲೆ: ರಾಜ್ಯ ಸರ್ಕಾರದಿಂದ ನೂತನ ಗೈಡ್ ಲೈನ್ ಬಿಡುಗಡೆ- ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 8 ಜಿಲ್ಲೆಗಳಲ್ಲಿ ಪಬ್, ಬಾರ್ ಗಳ ಮೇಲೆ ನಿರ್ಬಂಧ- ಥೀಯೇಟರ್ ಗಳಲ್ಲಿ ಶೇ. 50 ರಷ್ಟು ಮಾತ್ರ ಅವಕಾಶ!

- Advertisement -G L Acharya panikkar
- Advertisement -

ಬೆಂಗಳೂರು: ಕೊರೊನಾ ಕೈಮೀರುತ್ತಿರುವುದರಿಂದ ರಾಜ್ಯ ಸರ್ಕಾರ ನೂತನ ಗೈಡ್​ಲೈನ್ಸ್​ ಬಿಡುಗಡೆ ಮಾಡಿದೆ. 8 ಜಿಲ್ಲೆಗಳಲ್ಲಿ ಪಬ್‌, ಬಾರ್‌ಗಳಲ್ಲಿ ಗ್ರಾಹಕರ ಸಂಖ್ಯೆ ಶೇ.50ರಷ್ಟು ಮೀರುವಂತಿಲ್ಲ.

ಬೆಂಗಳೂರು,ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಬೀದರ್​, ಮೈಸೂರು 8 ಜಿಲ್ಲೆಗಳಲ್ಲಿ ಬಾರ್​,ಪಬ್​, ರೆಸ್ಟೋರೆಂಟ್​​ಗಳಿಗೆ ನಿರ್ಬಂಧ.

ಈ 8 ಜಿಲ್ಲೆಗಳ ಥಿಯೇಟರ್‌ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ. ಸಾಧ್ಯವಾದಷ್ಟು ವರ್ಕ್​​ ಫ್ರಂ ಹೋಂಗೆ ಒತ್ತು ನೀಡಬೇಕು. ಅಪಾರ್ಟ್‌ಮೆಂಟ್‌, ಪಾರ್ಟಿ ಹಾಲ್‌, ಈಜುಕೊಳ ಕ್ಲೋಸ್‌. ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕ ಪ್ರಾರ್ಥನೆಗೆ ಅವಕಾಶ, ಗುಂಪು ಗುಂಪಾಗಿ ಧಾರ್ಮಿಕ ಕಾರ್ಯಕ್ರಮ ಮಾಡುವಂತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ.

ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್​ ಧರಿಸುವುದು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸರ್​ ಬಳಕೆ ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರೆ ಮಹೋತ್ಸವಗಳು, ಮೇಳಗಳು, ಗುಂಪು ಸೇರುವುದು ನಿಷೇಧ ಮುಂದುವರಿಕೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು, ಇವುಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಜಾರಿಯಲ್ಲಿರುವ ನಿಯಮ/ಅದೇಶಗಳನ್ನು ಪೊಲೀಸ್​​ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು. ಏಪ್ರಿಲ್ 20 ವರೆಗೆ ಮಾತ್ರ ಈ ಆದೇಶ ಜಾರಿಯಲ್ಲಿರಲಿದೆ

- Advertisement -

Related news

error: Content is protected !!