Monday, April 15, 2024
spot_imgspot_img
spot_imgspot_img

ರಾಜ್ಯದಲ್ಲಿ ಇಂದು ಎರಡು ಸಾವಿರ ದಾಟಿದ ಕೊರೊನಾ ಮಹಾಸ್ಪೋಟ!  ರಾಜ್ಯದಲ್ಲಿ ಒಂದೇ ದಿನ 2062 ಮಂದಿಗೆ ಕೊರೊನಾ ವೈರಸ್ , ಬೆಂಗಳೂರಲ್ಲಿ 1148, ದ.ಕ.183ಮಂದಿಗೆ ಸೋಂಕು.!!!

- Advertisement -G L Acharya panikkar
- Advertisement -

ಬೆಂಗಳೂರು : ಕೊರೊನಾ ಮಹಾಮಾರಿಯ ಆರ್ಭಟ ಸದ್ಯಕ್ಕೆ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬೆಂಗಳೂರಲ್ಲಿ ಇಂದು ಒಂದೇ ದಿನ ಬರೋಬ್ಬರಿ 1148
ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 2062 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28877 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ ಬರೋಬ್ಬರಿ 54 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರು : ದ.ಕ ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾ ಸ್ಪೋಟ.!ಇಂದು  ಜಿಲ್ಲೆಯಲ್ಲಿ183 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ 63, ILI ಪ್ರಕರಣದಿಂದ 25, SARI ಪ್ರಕರಣ 4, ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 22 ಜನರಿಗೆ ,ಸಂಪರ್ಕಕ್ಕೆ ಸಿಗದ 54 ಪ್ರಕರಣ, ಶಸ್ತ್ರಚಿಕಿತ್ಸೆ ಮಾಡೋ ಮೊದಲು 5 ಜನರಿಗೆ ಕೊರೋನಾ‌ ಪಾಸಿಟಿವ್, ಅಂತರಾಷ್ಟ್ರೀಯ ಪ್ರಯಾಣದಿಂದ 5 ಮಂದಿಗೆ, ಅಂತರಾಜ್ಯ ಪ್ರಯಾಣ ದಿಂದ 2‌ ಪಾಸಿಟಿವ್ ಪತ್ತೆ ಆಗಿದೆ. ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾಮಾರಿ ಮೂವರನ್ನು ಬಲಿ ಪಡೆದಿದೆ.ಉಳ್ಳಾದ ಮೂಲದ 62 ವರ್ಷದ ವೃದ್ಧೆ , ಭಟ್ಕಳ ಮೂಲದ 60 ವರ್ಷದ ವೃದ್ಧ ಸಾವು ಹಾಗೂ ಪುತ್ತೂರು ಮೂಲದ 32 ವರ್ಷದ ಮಹಿಳೆ ಸೇರಿ ಮೂವರೂ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ವರದಿಯಾಗಿದೆ. ಜಿಲ್ರ್ಯಾಂಡಮ್ಕೊರೋನಾ ಸಾವಿನ ಸಂಖ್ಯೆ 29ಕ್ಕೇರಿಕೆ ಆಗಿದೆ. 

- Advertisement -

Related news

error: Content is protected !!