ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 4120 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 63,772ಕ್ಕೆ ಏರಿಕೆಯಾಗಿದೆ.

ಅಲ್ಲದೇ, 91 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿಯ ತನಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,331ಕ್ಕೆ ಏರಿಕೆಯಾಗಿದೆ. ಇನ್ನು ಇಂದು 1290 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟರೆ ಡಿಸ್ಚಾರ್ಜ್ ಆದವರ ಸಂಖ್ಯೆ 23,065ಕ್ಕೆ ಏರಿದೆ. 39,370 ಪ್ರಕರಣಗಳು ಸಕ್ರೀಯವಾಗಿದ್ದು, 579 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ 2,156 ಮಂದಿಗೆ ಕೊರೊನಾ ಪಾಸಿಟಿವ್:
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 2156 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 36 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ನಗರದಲ್ಲಿ ಇಂದು 253 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ದ.ಕ ಜಿಲ್ಲೆಯಲ್ಲಿ 285 ಮಂದಿಗೆ ಕೊರೊನಾ:
ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಕಳೆದ 24 ಗಂಟೆಗಳಲ್ಲಿ 285 ಮಂದಿಗೆ ಸೋಂಕು ತಗುಲಿದೆ. 2 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 77 ವರ್ಷದ ಮಹಿಳೆ ಹಾಗೂ 53 ವರ್ಷದ ಗಂಡಸು ಕೊರೋನಾಗೆ ಬಲಿಯಾಗಿದ್ದಾರೆ.104 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 3596 ಆಗಿದ್ದು, ಇಲ್ಲಿಯವರೆಗೆ 1491 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,028 ಆಕ್ವೀವ್ ಕೇಸ್ ಇದೆ.

ಇದರ ನಡುವೆ ಸಿಎಂ ಬಿ.ಎಸ್ ಯಡಿಯೂರಪ್ಪ ನಾಳೆ ಟಾಸ್ಕ್ ಪೋರ್ಸ್ ಜತೆ ಸಭೆ ನಡೆಸಲಿದ್ದಾರೆ. ಲಾಕ್ ಡೌನ್ ವಿಸ್ತರಣೆ ಬೇಕೋ ಬೇಡವೋ ಎಂಬುದರ ಬಗ್ಗೆ ನಾಳೆ ನಿರ್ಧಾರವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
