Monday, May 6, 2024
spot_imgspot_img
spot_imgspot_img

ಜನಾರ್ದನ ರೆಡ್ಡಿಗೆ ಶಾಕ್‌ ನೀಡಿದ ನ್ಯಾಯಾಲಯ; ದಂಪತಿಗಳ ಆಸ್ತಿ ಜಪ್ತಿಗೆ ಆದೇಶ

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ ಹೊರಡಿಸುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್​ ನೀಡಿದೆ.

ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮೀ ರೆಡ್ಡಿಗೆ ನ್ಯಾಯಾಲಯ ಆಘಾತ ನೀಡಿದ್ದು, ರೆಡ್ಡಿ ದಂಪತಿ ಒಡೆತನದ 2009ರ ಜನವರಿ ನಂತರ ಖರೀದಿ ಮಾಡಿದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಅರುಣಾ ಲಕ್ಷ್ಮೀ ಹೆಸರಲ್ಲಿ 75ಕ್ಕೂ ಅಧಿಕ ಆಸ್ತಿಗಳಿವೆ. ಬೆಂಗಳೂರು, ಬಳ್ಳಾರಿ ಹಾಗೂ ಆಂಧ್ರದಲ್ಲಿ ರೆಡ್ಡಿ ದಂಪತಿ ಆಸ್ತಿ ಮಾಡಿದ್ದಾರೆ. ಇದೀಗ ರೆಡ್ಡಿ ದಂಪತಿ ಒಡೆತನದ ನೂರಕ್ಕೂ ಅಧಿಕ ಆಸ್ತಿಗಳನ್ನು ಜಪ್ತಿ ಮಾಡುವಂತೆ ನ್ಯಾಯಾಧೀಶ ಜಯಂತ್​ ಕುಮಾರ್ ಅವರು ಆದೇಶ ಮಾಡಿದ್ದಾರೆ.

ಸೈಟ್, ಕಟ್ಟಡ, ಖಾಲಿ ಜಮೀನು ಸೇರಿದಂತೆ ನೂರಕ್ಕೂ ಅಧಿಕ ಆಸ್ತಿಗಳಿವೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ವೇಳೆ ಸಿಬಿಐ ಅಧಿಕಾರಿಗಳು ಆಸ್ತಿಗಳನ್ನು ಗುರುತಿಸಿದ್ದರು. ಸಿಬಿಐ ಪರವಾಗಿ ವಿಶೇಷ ಅಭಿಯೋಜಕ ಗೋವಿಂದನ್ ವಾದಿಸಿದ್ದರು.

- Advertisement -

Related news

error: Content is protected !!