ಕೊರೋನಾ ಲಾಕ್ ಡೌನ್ ಸಂದರ್ಭ ಅಂಗಳದಲ್ಲಿ ಆಡ್ತಾ ಯುವತಿಯೊಬ್ಬಳು ಬಾರಿಸಿದ ಕವರ್ ಡ್ರೈವ್ ವೀಡಿಯೋ ಭಾರೀ ವೈರಲಾಗುತ್ತಿದೆ.
ಕೇವಲ ಆರೇ ಆರು ಸೆಂಕಡು ಇರೋ ವಿಡಿಯೋ ಇದು. ಅಂತರಾಷ್ಟ್ರೀಯ ಮಾಧ್ಯಮ ESPN ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇಂಥದೊಂದು ಹೊಡೆತವನ್ನು ನೀವು ಎಂದಾದ್ರೂ ನೋಡಿದ್ದಿರಾ ಅಂತಾ ಬಣ್ಣಿಸಿದೆ.
ಲೆಗ್ ಸ್ಟಂಪ್ ನಿಂದ ಆಚೆ ಹೋಗಿ ಒಂದು ಸ್ಪೆಪ್ ಮುಂದೆ ಬಂದು ಚೆಂಡಿನ ಮೇಲೆ ಹದ್ದಿನ ಕಣ್ಣಿನ ಗುರಿಯಿಟ್ಟ ಹುಡುಗಿಯೊಬ್ಬಳು ಹೊಡೆದ ಕವರ್ ಡ್ರೈವ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಹುಡಗಿ ಹೊಡೆದ ಕವರ್ ಡ್ರೈವ್ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟಿಗರನ್ನೇ ನಾಚಿಸುವಂತಿದೆ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.
ಈ ಕವರ್ ಡ್ರೈವ್ ಸ್ಪೆಷಲಿಸ್ಟ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದವಳು. ಈಕೆಯ ಹೆಸರು ಜ್ಯೋತಿ. ಈಕೆ ಚಿಕ್ಕ ವಯಸ್ಸಿನಿಂದಲೇ ಶಾಲಾ ದಿನಗಳಲ್ಲೂ ಕೂಡ ಹುಡುಗರು ಆಡೋ ಮೈದಾನದಲ್ಲಿ ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಳು. ಇದೀಗ ಮನೆಯವರ ಜೊತೆ ಅಂಗಳದಲ್ಲಿ ಕ್ರಿಕೆಟ್ ಆಡುವಾಗ ಚಿತ್ರೀಕರಿಸಿದ ವೀಡಿಯೋ ವೈರಲಾಗಿದೆ.
ಗ್ರಾಮೀಣ ಮಟ್ಟದ ಪ್ರತಿಭೆ ಕೇವಲ ಪ್ರತಿಭೆಯಾಗಿಯೇ ಉಳಿದಿದೆ, ಸೂಕ್ತ ತರಬೇತಿ ಸಿಕ್ಕಿದ್ರೆ ಈಕೆ ಖಂಡಿತವಾಗಿಯೂ ಉತ್ತಮ ಆಟಗಾರ್ತಿ ಆಗ್ತಾಳೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾಳೆ. ಇಷ್ಟೆಲ್ಲ ಆದ್ರೂ ಜ್ಯೋತಿ ಮಾಧ್ಯಮಗಳ ಮುಂದೆ ಬರೋದಕ್ಕೆ ಹಿಂಜರಿದಿದ್ದಾಳೆ.