Friday, April 26, 2024
spot_imgspot_img
spot_imgspot_img

ಹಸುವಿನ ಸಗಣಿಯಿಂದ ಹೊಸ ಸಂಶೋಧನೆ

- Advertisement -G L Acharya panikkar
- Advertisement -

ನವದೆಹಲಿ: ಹಸುವಿನ ಸಗಣಿಯಿಂದ ತಯಾರಿಸಿದ ಚಿಪ್​ನಿಂದ ಮೊಬೈಲ್ ಫೋನ್​ ರೇಡಿಯೇಷನ್ಸ್​ ತಡೆಗಟ್ಟಬಹುದು ಎಂಬ ಹೇಳಿಕೆ ಹಿನ್ನೆಲೆ ಸುಮಾರು 600ಕ್ಕೂ ಹೆಚ್ಚು ವಿಜ್ಞಾನಿಗಳು ಸಾಕ್ಷಿ ಕೇಳಿದ್ದಾರೆ.
ಕಳೆದ ವಾರ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕತಿರಿಯಾ ಸಗಣಿಯ ಚಿಪ್​ ಬಿಡುಗಡೆ ಮಾಡಿದ್ರು. ಈ ಚಿಪ್ ಅಳವಡಿಸಿದ್ರೆ​​ ಮೊಬೈಲ್​ಗಳಿಂದ ಹೊರಹೊಮ್ಮುವ ಹಾನಿಕಾರಕ ರೇಡಿಯೇನ್ಸ್​​ ತಡೆಗಟ್ಟಬಹುದು. ಸಗಣಿ, ರೇಡಿಯೇಷನ್ಸ್​ ತಡೆಯುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಹೇಳಿದ್ದರು.

ಈ ಹಿನ್ನೆಲೆ ವಲ್ಲಭಭಾಯ್ ಅವರಿಗೆ 600ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ವಿಜ್ಞಾನ ಬೋಧಕರು ಪತ್ರ ಬರೆದು, ನಿಮ್ಮ ಹೇಳಿಕೆಯನ್ನ ದೃಢಪಡಿಸಲು ವೈಜ್ಞಾನಿಕ ಆಧಾರವೇನು ಎಂದು ಕೇಳಿದ್ದಾರೆ. ಈ ಸಂಬಂಧ ಮಾಹಿತಿ ಅಥವಾ ಯಾವುದಾದ್ರೂ ಎಕ್ಸ್​ಪೆರಿಮೆಂಟ್ಸ್​​ ನಡೆದಿದ್ರೆ ಅದರ ಮಾಹಿತಿ ನೀಡುವೀರಾ ಎಂದು ಕೇಳಿದ್ದಾರೆ.

- Advertisement -

Related news

error: Content is protected !!